ಕವಿ ರಾಜಮಾರ್ಗಕ್ಕೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಕಾವ್ಯ ಶಾಸ್ತ್ರದ ಹಲವು ವಿಷಯಗಳ ಜೊತೆಗೆ ಆ ಕಾಲದ ಕನ್ನಡ ನಾಡು, ನುಡಿ, ಜನ ಮೊದಲಾದವುಗಳ ಬಗ್ಗೆ ಮಾಹಿತಿಗಳೂ ಇವೆ. ಕವಿರಾಜಮಾರ್ಗದಂತ ಶಾಸ್ತ್ರಗ್ರಂಥಗಳು ಪದಗಳ ಅನ್ವಯ, ಅರ್ಥ, ಗದ್ಯಾನುವಾದ ಮತ್ತು ವಿವರಣೆಯನ್ನು ಅಪೇಕ್ಷಿಸುತ್ತವೆ ಮತ್ತು ಅವುಗಳನ್ನೆಲ್ಲ ಒದಗಿಸುವುದು ಸಾಹಸವೇ ಸರಿ. ಬಹುಭಾಷಾ ವಿದ್ವಾಂಸರಾದ ಆರ್‍ವಿಯಸ್ ಸುಂದರಂ ರವರು ಹಲವು ಹಸ್ತಪ್ರತಿ, ಮುದ್ರಿತ ಆವೃತ್ತಿಗಳು, ಮೀಮಾಂಸ ಗ್ರಂಥಗಳನ್ನು ಗಂಭೀರವಾಗಿ ಮತ್ತು ಕೂಲಂಕಷವಾಗಿ ಪರಾಮರ್ಶಿಸಿದ್ದಾರೆ. ಮೂಲ ಕೃತಿಯ ಆಶಯಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ, ಯಾವುದೇ ವ್ಯಾಕರಣ ವ್ಯತ್ಯಾಸವಾಗದಂತೆ ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.