ಲೇಖಕ ಪರಮೇಶ್ವರಯ್ಯ ಸೊಪ್ಪಿಮಠ ಅವರ ಕೃತಿ-ಶಿಕ್ಷಣ ದೀವಿಗೆ. ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದ ಮನೋವೈಜ್ಞಾನಿಕ ವಿಚಾರಗಳ ಸಂಗ್ರಹ ಕೃತಿ. ಇಲ್ಲಿಯ ಬಹುತೇಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತಿ ಆರ್. ಬಿ. ಗುರುಬಸವರಾಜ ಅವರ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ ಶಿಕ್ಷಕರಿಗೆ, ಶಿಕ್ಷಣಾಭಿಮಾನಿಗಳಿಗೆ, ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಸಂಶೋಧಕರಿಗೆ, ಪರೀಕ್ಷಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಈ ಪುಸ್ತಕವು ಆಪ್ತ ಸಂಗಾತಿಯಾಗಿದೆ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.