‘ಸಾಹಿತ್ಯ ಸಂವಾದ’ ಕೃತಿಯು ರಾಘವೇಂದ್ರ ಪಾಟೀಲ ಅವರ ದ್ವಿಮಾಸಿಕ ಪತ್ರಿಕೆ, ಸಂವಾದ ಸಂಚಯ, ಕನ್ನಡ ಸಾಹಿತ್ಯ ವಿಚಾರಗಳನ್ನು ಒಳಗೊಂಡ ಕೃತಿಯಾಗಿದೆ. ಈ ಸಂಚಿಕೆಯಲ್ಲಿ ಕಾವ್ಯ :ಚಂದ್ರಶೇಖರ ತಾಳ್ಯರ ಮೂರು ಕವಿತೆಗಳು, ತೇರು ಕಾದಂಬರಿಯ ಮೊದಲ ಭಾಗ (ರಾಘವೇಂದ್ರ ಪಾಟೀಲ), ಸೇಡಿಯಾಪು ಕರಷ್ಣಭಟ್ಟರ ಕಥೆಗಳು (ತಾಳ್ತಜೆ ವಸಂತಕುಮಾರ), ಹರಿಹರದಲ್ಲಿ ಸ್ತ್ರೀ ಮತ್ತು ಕಾಮದ ನೆಲೆಗಳು (ರಾಮಲಿಂಗಪ್ಪ ಟಿ. ಬೇಗೂರು), ಸಮಾಜವಾದಿ ತತ್ವದ ತಂತ್ರಜ್ಞಾನ ನೀತಿ ( ಜಿ.ಎನ್. ಮಲ್ಲಿಕಾರ್ಜುನ), ಕಲೆ ಎಂದರೆ ಏನು? (ಚಂದ್ರಕಾಂತ ಕುಸನೂರು), ಸಾಹಿತ್ಯ ಮತ್ತು ಧರ್ಮ : ಅಂತರ ಮತ್ತು ಅಂತರ್ ಸಂಬಂಧ (ಕಾಂ. ಶ್ರೀನಿವಾಸಮೂರ್ತಿ), ಕಂಬಾರರ ನಾಟಕಗಳು : ಆಧುನಿಕ ಬದುಕಿನ ಸಂಘರ್ಷಗಳು ಅಥವಾ ‘ಹೇಳತೇನ ಕೇಳ’ ದ ನವ ಪುರಾಣಗಳು (ಶಿವಾ ರೆಡ್ಡಿ), ಹೊಸ ಓದು : ಗಣೆಯ ನಾದ/ ಶಂಕರ ಕಟಗಿ (ಪ್ರಹ್ಲಾದ್ ಅಗಸನಕಟ್ಟೆ), ಕೈಮರದ ನೆರಳಲ್ಲಿ (ಕೆ.ಎಸ್. ನರಸಿಂಹಸ್ವಾಮಿ) ಚಂದ್ರಶೇಖರ ತಾಳ್ಯ, ಸಂಪಾದಕನ ಟಿಪ್ಪಣಿಗಳನ್ನು ಒಳಗೊಂಡಿದೆ.
©2024 Book Brahma Private Limited.