ಕನ್ನಡಪ್ರಭ (2009-10) ಹಾಗೂ ಇತರೆ ದಿನಪತ್ರಿಕೆಗಳಲ್ಲಿ ಸ್ಥಳನಾಮಗಳ ಕುರಿತು ವೈ.ಬಿ. ಕಡಕೋಳ ಅವರು ಬರೆದ ಬರಹಗಳ ಸಂಗ್ರಹ-ಚರಿತ್ರೆಗೊಂದು ಕಿಟಕಿ. ಸವದತ್ತಿ, ನವಿಲುತೀರ್ಥ, ಶಿರಸಂಗಿ, ಹೂಲಿ, ಪಟ್ಟದಕಲ್ಲು, ಹಂಪಿ, ತುಳಸೀಗೇರಿ, ಕೊಪ್ಪಳ, ಲಕ್ಕುಂಡಿ, ಆಚನೂರು, ಸೂಡಿ, ಮುನವಳ್ಳಿ, ಹುಬ್ಬಳ್ಳಿ, ಮುರಗೋಡ, ಮುನವಳ್ಳಿ ಹೀಗೆ ವಿವಿಧ ಊರುಗಳ ಐತಿಹಾಸಿಕ- ಪೌರಾಣಿಕ ಹಿನ್ನೆಲೆಯ ಮಾಹಿತಿಯೊಂದಿಗಿನ ವಿವರಣೆಯು ಈ ಕೃತಿಯಲ್ಲಿವೆ. ಸ್ಥಳನಾಮ, ಸ್ಥಳೀಯ ಚರಿತ್ರೆ ಇತ್ಯಾದಿ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ-ಶಿಕ್ಷಕರಿಗೆ ಈ ಕೃತಿಯು ಉಪಯುಕ್ತ ಆಕರ ಗ್ರಂಥವಾಗಿದೆ.
ಸಾಹಿತಿ ಆರ್.ಆರ್. ಸದಲಗಿ ಅವರು ಕೃತಿಗೆ ಮುನ್ನುಡಿ ಬರೆದು ‘ಅನೇಕ ಬರಹಗಳು ಚಿಕ್ಕದಾದರೂ ಗ್ರಾಮಗಳ ಸ್ಥಳ-ಪುರಾಣ-ಇತಿಹಾಸ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಗ್ರಾಮ ವೈಶಿಷ್ಟ್ಯಗಳನ್ನು ನೀಡಿದ್ದು, ಈ ಕೃತಿಯ ವಿಶೇಷ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.