‘ಮಂಗಳೂರು ಗೋಲಿಬಾರ್’ ಕರಾಳ ಸತ್ಯ ಪತ್ರಕರ್ತ ರಾ.ಚಿಂತನ್ ಅವರ ತನಿಖ ವರದಿ. ಈ ಕೃತಿಗೆ ಹಿರಿಯ ನ್ಯಾಯವಾದಿ ಹಾಗೂ ಲೇಖಕರಾದ ಡಾ.ಸಿ.ಎಸ್. ದ್ವಾರಕಾನಾಥ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ… ಈ ತನಿಖಾ ವರದಿ ಅದೆಷ್ಟು ವಸ್ತುನಿಷ್ಠವಾಗಿದೆಯಲ್ಲವೇ..ಒಮ್ಮೆಗೆ ಇದನ್ನು ಓದಿದಾಗ ನನಗೆ ಅನಿಸಿದ್ದು, ಒಬ್ಬ ವಕೀಲನಾಗಿ ಈ ವರದಿಯ ಒಳ ಹೊಕ್ಕಂತೆಲ್ಲಾ ನ್ಯಾಯಾಲಯಗಳ ಈಚಿನ ತೀರ್ಪುಗಳೇ ಪೂರ್ವಾಗ್ರಹ ಪೀಡಿತವಾಗಿ ಬರುತ್ತಿರುವ ಕಾಲಘಟ್ಟದಲ್ಲಿ ಜನಸಾಮಾನ್ಯನೊಹ್ಹ ನ್ಯಾಯಮೂರ್ತಿಯಂತೆ ಚಿಂತಿಸುತ್ತಿರುವುದು ನನಗೆ ಅಚ್ಚರಿಯನ್ನುಂಟುಮಾಡಿತು. ಶ್ರೀಸಾಮಾನ್ಯನೊಬ್ಬ ಗಂಭೀರ ಸಮಸ್ಯೆಯೊಂದರ ಮಧ್ಯದಲ್ಲಿ ನಿಂತು ಎರಡೂ ಕಡೆಯೂ ತೂಗದೆ ವಸ್ತುನಿಷ್ಟವಾಗಿ ವರದಿ ಮಾಡಿದ್ದೇನೆ. ಹೈದರಾಬಾದಿನಂತಹ ಅತಿ ದೊಡ್ಡ ಹಿಂದು-ಮುಸ್ಲಿ ಗಲಭೆ, ಭಾರತದಲ್ಲಿ ಹಿಂದೆಂದೂ ದಾಖಲಾಗಿರದಂತಹ ಕೋಮು ಗಲಭೆ ನನ್ನೂರು ಕೋಲಾರದಲ್ಲೇ ನಡೆದುಹೋಯಿತು. ಅತಿ ದೀರ್ಘಾವಧಿಯ ಕರ್ಫ್ಯೂ ಅಲ್ಲಿ ಜಾರಿಯಾಗಿತ್ತು. ಅದಕ್ಕೆ ಸಂಬಂಧಿಸಿದ ವರದಿಯನ್ನು ನಾನು ಲಂಕೇಶ್ ಪತ್ರಿಕೆಗೆ ಮಾಡಿದ್ದೆ. ಆಗ ಮಾಡಿದ್ದ ನನ್ನ ತನಿಖಾ ವರದಿಗಳು ಆಗಿನ ಸಂದರ್ಭದಲ್ಲಿ ನ್ಯಾಯಾಂಗ ತನಿಖೆಗೂ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದವು ಎನ್ನುತ್ತಾರೆ. ಜೊತೆಗೆ ಮಂಗಳೂರಿನ ಘಟನೆಯ ಬಗ್ಗೆ ರಾ.ಚಿಂತನ್ ಬರೆದಿರುವ ಈ ತನಿಖಾ ವರದಿಯು ತನ್ನೆಲ್ಲಾ ದಾಖಲಾತಿಗಳೊಂದಿಗೆ ನ್ಯಾಯಾಂಗ ತನಿಖೆಗೂ ಆಧಾರವಾಗಬಹುದು ಅನ್ನಿಸುತ್ತಿದೆ ಎಂದಿದ್ದಾರೆ. ಈ ಪುಸ್ತಕವು ಘಟನೆಯ ಪರ ಮತ್ತು ವಿರೋಧದ ನಡುವಿನ ಪೂರ್ವಗ್ರಹ ಮನಸ್ಥಿತಿಯ ಗೊಂದಲವನ್ನು ನಿವಾರಿಸುತ್ತದೆ, ಇಂತಹ ತನಿಖಾ ವರದಿಗಳು ಪ್ರಸ್ತುತ ಸಮಾಜಕ್ಕೆ ನಗ್ನಸತ್ಯ ತಿಳಿಸಲು ಅಗ್ಯವಾಗಿದೆ. ಎಡವೂ ಅಲ್ಲದ, ಬಲವೂ ಅಲ್ಲದ ಸಂವಿಧಾನ ಬದ್ಧವಾದ ಹಾದಿಯಲ್ಲಿ ಇಡೀ ವರದಿ ಇದೆ ಎಂದು ದ್ವಾರಕಾನಾಥ್ ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.