ಕೆಲವು ನೆನಪುಗಳು

Author : ನವರತ್ನ ರಾಮರಾವ್

Pages 392

₹ 150.00




Year of Publication: 2012
Published by: ಡಿ.ವಿ.ಕೆ. ಮೂರ್ತಿ
Address: # 1498/1, ರಾಮಯ್ಯ ರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು-570004
Phone: 0821233 1484

Synopsys

ಹಿರಿಯ ಲೇಖಕ ನವರತ್ನ ರಾಮರಾವ್ ಅವರ ಕೃತಿ-ಕೆಲವು ನೆನಪುಗಳು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಲಹೆ ಮೇರೆಗೆ ಜೀವನ ಪತ್ರಿಕೆಯಲ್ಲಿ ಕೆಲವು ಬರಹಗಳನ್ನು ಬರೆದಿದ್ದು, ಅವುಗಳನ್ನು ಧಾರವಾಡದ ಮನೋಹರ ಗ್ರಂಥಮಾಲೆ ಪುಸ್ತಕ ರೂಪದಲ್ಲಿ ಪ್ರಕಟಿಸಿತ್ತು. ‘ಕೆಲವು ನೆನಪುಗಳು’ ಶೀರ್ಷಿಕೆಯಡಿಯ ಪುಸ್ತಕವೇ ಇದು. ಕನ್ನಡ, ಸಂಸ್ಕೃತ, ಫ್ರೆಂಚ್, ಕಾನೂನು ಹೀಗೆ ವಿವಿಧ ಭಾಷೆ ಹಾಗೂ ವಿದ್ವತ್ ವಲಯಗಳ ಆಳವಾದ ಜ್ಞಾನದ ಪ್ರತೀಕಗಳಾಗಿ ಇಲ್ಲಿಯ ಬರಹಗಳಿವೆ.

About the Author

ನವರತ್ನ ರಾಮರಾವ್
(29 May 1877 - 27 November 1960)

ಲೇಖಕ ನವರತ್ನ ರಾಮರಾವ್ ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ. ತಂದೆ- ನವರತ್ನ ಬಾಲಕೃಷ್ಣರಾಯರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಾಮರಾವ್ ಅವರು ಓದಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಅಧ್ಯಾಪಕ ಟೇಟ್ ಸಾಹೇಬರ ಸಹಪಾಠಿಯಾಗಿದ್ದ ರಾಜಾಜಿಯವರ ಸ್ನೇಹಿತರು. ಇಂಗ್ಲಿಷ್‌ನಲ್ಲಿ ಅಸಾಧಾರಣ ಪಾಂಡಿತ್ಯವಿತ್ತು.  ಈಜು, ಕ್ರಿಕೆಟ್, ಗರಡಿ ಸಾಧನೆ ಇವರ ಹವ್ಯಾಸ. ಸಂಸ್ಕೃತ ಹಾಗೂ ಫ್ರೆಂಚ್ ಭಾಷೆ ಕಲಿತಿದ್ದರು. ಕಾನೂನು ವ್ಯಾಸಂಗಕ್ಕಾಗಿ ಮದರಾಸಿಗೆ ಹೊರಟಾಗ ಮೈಸೂರು ಸರಕಾರ ಪ್ರೊಬೆಷನರಿ ಅಕಾರಿಯಾಗಿ ಆಯ್ಕೆ ಮಾಡಿ ಅಮಲ್ದಾರರಾಗಿ ನೇಮಕ ಮಾಡಲಾಗಿತ್ತು. ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಪಡೆದರು. ಮಾತಿನಲ್ಲಿ ಚತುರರಾಗಿದ್ದ ಅವರು ಪ್ರಜಾಪ್ರತಿನಿ ಸಭೆಯಲ್ಲಿ, ...

READ MORE

Related Books