ಕರ್ನಾಟಕದಿಂದ ಭಾರತದ ಪ್ರದಾನಿಯಾದವರ ಪೈಕಿ ಎಚ್.ಡಿ. ದೇವೇಗೌಡರು ಮೊದಲಿಗರು. ಅವರ ಚಾಣಾಕ್ಷ ರಾಜಕಾರಣವು ಭಾರತೀಯ ರಾಜಕೀಯ ವಲಯದಲ್ಲಿ ಅಧ್ಯಯನ ಯೋಗ್ಯವಾಗಿದೆ. ಸುಮಾರು 25 ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾದ ದೇವೇಗೌಡರಿಗೆ ಸಂಬಂಧಿಸಿದ ಸುದ್ದಿಗಳ ತುಣುಕುಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ ಇದು. ಲೇಖಕ ಸೊಂದಲಗೆರೆ ಲಕ್ಷ್ಮಿಪತಿ ಅವರು ಕೃತಿಯ ಸಂಪಾದಕರು. ಗ್ರಾ,ಮೀಣ ಭಾರತದ ಸ್ವರೂಪ-ಅಭಿವೃದ್ಧಿ-ತಾಂತ್ರಿಕತೆಗೆ ಪೂರಕವಾಗುವ ಯೋಜನೆಗಳು, ಎಚ್.ಡಿ. ದೇವೇಗೌಡರ ವ್ಯಕ್ತಿಗತ ವಿಚಾರಗಳು, ಅವರ ಸಾಮಾಜಿಕ ವಿಚಾರಗಳು, ದೂರದೃಷ್ಟಿ., ದೇಶದ ಪರಿಕಲ್ಪನೆ, ಜನಪರ ಯೋಜನೆಗಳು, ದೇಶದ ಸ್ವಾತಂತ್ಯ್ರ ಹೋರಾಟದ ಚಿತ್ರಣ, ಕೋಮು ಸೌಹಾರ್ದತೆ ಇತ್ಯಾದಿ ವಿಷಯಗಳ ಮೇಲಿನ ಸ್ಥೂಲ ನೋಟವನ್ನು ಈ ಕೃತಿಯು ಒಳಗೊಂಡಿದೆ.
©2025 Book Brahma Private Limited.