ಸಿಎಎ, ಎನ್., ಪಿ.ಆರ್ ಹಾಗೂ ಎನ್. ಆರ್. ಸಿ ಕುರಿತು ವಿವಿಧ ಲೇಖಕರು ವಾಸ್ತವತೆ ಹಾಗೂ ಅವಾಸ್ತವತೆಗಳನ್ನು ವಿಶ್ಲೇಷಿಸಿ ಬರೆದ ಬರೆಹಗಳ ಸಂಕಲನವಿದು. ಸಮಾನ ನಾಗರಿಕತ್ವದ ಸಮಸ್ಯೆ, ದೇಶಿಯ ಪೌರತ್ವದ ಪ್ರಶ್ನೆ, ಸೇರಿದಂತೆ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಇಲ್ಲಿ ಪ್ರಶ್ನಿಸಿ ಇವುಗಳ ಹಿಂದೆ ರಾಜಕೀಯ ತಂತ್ರಗಳಿವೆ ಎಂಬುದರ ಬಗ್ಗೆ ತರ್ಕಗಳಿವೆ. ಭಾರತ ಎಂಬುದು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಜಾತಿ-ಧರ್ಮ ತಾರತಮ್ಯದ ವೈಮನಸ್ಸುಗಳ ಬೀಜ ಬಿತ್ತಲಾಗುತ್ತಿದೆ ಎಂಬ ಆರೋಪವು ಪ್ರಮುಖ ಧ್ವನಿಯಾಗಿದೆ. ಇಂತಹ ಕರಾಮತ್ತುಗಳ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನದ ಭಾಗವಾಗಿಯೂ ಈ ಕೃತಿ ಪ್ರಕಟಗೊಂಡಿದೆ.
©2025 Book Brahma Private Limited.