'ಶಬ್ದಗುಣ' ವಸಂತ ಬನ್ನಾಡಿ ಅವರ ಅರೆವಾರ್ಷಿಕ ಪತ್ರಿಕೆಯಾಗಿದೆ. ತನ್ನ ಪ್ರತೀ ಸಂಚಿಕೆಯಲ್ಲಿ ಸಾಂಸ್ಕೃತಿಕವಾಗಿ ಮುಖ್ಯರಾದ ವ್ಯಕ್ತಿಗಳ ಜೊತೆಗಿನ ದೀರ್ಘವಾದ ಸಂದರ್ಶನವನ್ನು ಪ್ರಕಟಿಸುವ ಇರಾದೆ ಹೊಂದಿದೆ. ಈ ಸಂಚಿಕೆಯಲ್ಲಿ ಇಬ್ಬರು ಮಹತ್ತ್ವದ ರಂಗ ನಿರ್ದೇಶಕರಾದ ಸುರೇಶ ಆನಗಳ್ಳಿ ಹಾಗೂ ಗೋಪಾಲಕೃಷ್ಣ ನಾಯಿರಿ ಅವರ ಸಂದರ್ಶನವಿದೆ. ಆನಗಳ್ಳಿ ಕಳೆದ ಮೂವತ್ತು ವರ್ಷಗಳಿಂದ ನಾಟಕವಾಡಿಸುತ್ತಾ ಬಂದಿರುವವರು. ಈಚಿನ ಐದಾರು ವರ್ಷಗಳಲ್ಲಿ ಸತತವಾಗಿ ನಾಟಕಗಳನ್ನು ನಿರ್ದೇಶಿಸುತ್ತಾ ತನ್ನದೇ ಆದ 'ಈಡಿಯಮ್'ನ್ನು ಕಂಡುಕೊಂಡವರು. ಕನ್ನಡ ರಂಗಭೂಮಿಯಲ್ಲಿ ನಾಯಿರಿ ನಾಟಕ ಕಟ್ಟುವ ರೀತಿ ಅವರದ್ದೇ ಮಾದರಿ ಎಂದರೂ ಸರಿಯೇ. ಈ ಇಬ್ಬರ ಬಗೆಗಿನ ಎಸ್. ಶಿವಪ್ರಕಾಶ್ ಮತ್ತು ಕ ವೆಂ. ರಾಜಗೋಪಾಲ್ ಅವರ ಲೇಖನಗಳೂ ಈ ಸಂಚಿಕೆಯಲ್ಲಿದೆ. 'ಶಬ್ದಗುಣ, ತನ್ನ ಸಂಚಿಕೆಯಲ್ಲಿ ಒಂದಾದರೂ ಹೊಸ ಕತೆಯನ್ನು ಪ್ರಕಟಿಸುವ ಉದ್ದೇಶ ಹೊಂದಿದೆ. ಈ ಸಂಚಿಕೆಯಲ್ಲಿ ಎನ್ ರಾಮಚಂದ್ರ ಅವರು ಬರೆದಿರುವ ಏನಿದೇನಿದು ಪ್ರಯತ್ನವೇ... ಕಥೆ ಇದೆ. ಎಂಬತ್ತರ ದಶಕದಲ್ಲಿಯೇ ತಮ್ಮ ಮೊದಲ ಕಥಾಸಂಕಲನವನ್ನು ಕಳಿಸಿದ್ದ ಹಿರಿಯ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರ ಅವರು ಈಚೆಗೆ ಬರೆದಿರುವ ಹೊಸ ಕತೆ ಇದಾಗಿದೆ.
©2024 Book Brahma Private Limited.