ಅಜಲು (ಪತ್ರಿಕಾ ಬರಹಗಳು)

Author : ಲಕ್ಷ್ಮಣ ಕೊಡಸೆ

Pages 104

₹ 60.00




Year of Publication: 2009
Published by: ಪ್ರೆಸ್ ಕ್ಲಬ್
Address: ಪ್ರೆಸ್ ಕ್ಲಬ್, ಕಬ್ಬನ್ ಪಾರ್ಕ್, ಬೆಂಗಳೂರು- 560 001

Synopsys

ಲೇಖಕ ಲಕ್ಷ್ಮಣ ಕೊಡಸೆ ಅವರ ಆಯ್ದ ಪತ್ರಿಕಾ ಬರಹಗಳ ಸಂಕಲನ-ಅಜಲು. `ನಿರುದ್ವಿಗ್ನ ಶೈಲಿ, ಪದಲೋಲುಪತೆ ಒಲ್ಲದ ಲೇಖನಿ. ಗ್ರಾಮೀಣ ಪರಿಸರ ಹಾಗೂ ನಗರದ ಬದುಕು- ಎರಡನ್ನೂ ಸಮತೋಲನದಿಂದ ಕಾಣುವ ಹದ ಮನಸ್ಸು. ಆರೋಗ್ಯಕರ ವಿಚಾರಧಾರೆ. ಧಾವಂತದ ಪತ್ರಿಕಾ ಬರಹಗಳಲ್ಲಿಯೂ ಸಾಹಿತ್ಯದ ಆರ್ದ್ರತೆ ಉಳಿಸಿಕೊಂಡಿರುವುದು ಲೇಖಕರ ಹೆಗ್ಗಳಿಕೆ ಎಂಬುದು ಈ ಕೃತಿ ಕುರಿತಾಗಿ ಪತ್ರಕರ್ತ ರಘುನಾಥ ಚ ಹ ಅವರ ಅನಿಸಿಕೆ. ಇಲ್ಲಿಯ ಲೇಖನಗಳು ಪತ್ರಿಕಾ ಪಠ್ಯವಾಗಿಯೂ ಕಿರಿಯ ಪತ್ರಕರ್ತರಿಗೆ ಅಧ್ಯಯನ ಮಾದರಿಯಾಗಿವೆ ಎಂದು ಹಿರಿಯ ಪತ್ರಕರ್ತ ಅರುಣ್ ಅಭಿಪ್ರಾಯ ಪಟ್ಟಿದ್ದಾರೆ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books