ವಚನ ಸಾಹಿತ್ಯ ಸಂವಾದ-ಈ ಕೃತಿಯು ಪ್ರಜಾವಾಣಿ ಅಂಕಣಗಳ ಬರೆಹ. ಲೇಖಕ ಎಚ್. ಎಸ್. ಶಿವಪ್ರಕಾಶ್ ಅವರು ಪ್ರತಿಸ್ಪಂದನ ಅಂಕಣದಲ್ಲಿ (2013ರ ಮಾ.14) ವಚನ ಸಾಹಿತ್ಯ ಮತ್ತು ಜಾತಿ ವಿರೋಧ ಎಂಬ ಲೇಖನ ಬರೆದಿದ್ದರು. ವಚನಕಾರರ ಜಾತಿ ವಿರೋಧಕ್ಕೆ ಸಂಬಂಧಿಸಿದಂತೆ ಸ್ಥಾಪಿತ ಅಭಿಪ್ರಾಯಗಳಿಗಿಂತ ಭಿನ್ನವಾದ ನಿಲುವೊಂದನ್ನು ಡಂಕಿನ್ ಝಳಕಿ ಅವರ ಸಂಶೋಧನೆಯನ್ನು ವಿಮರ್ಶಾತ್ಮಕವಾಗಿ ಪರಿಚಯಿಸಿದ್ದರು. ಕನ್ನಡದ ವಿದ್ವಾಂಸರು ಪ್ರತಿಕ್ರಿಯಿಸಿದ್ದರು. ಹೀಗಾಗಿ, ವಚನ ಸಾಹಿತ್ಯದ 21ನೇ ಶತಮಾನದ ಚರ್ಚೆಯೊಂದಕ್ಕೆ ವೇದಿಕೆಯಾಯಿತು. ಎರಡೂವರೆ ತಿಂಗಳು ಕಾಲ ಚರ್ಚೆ ನಡೆಯಿತು. (2013ರ ಮೇ 24) ಎಚ್. ಎಸ್. ಶಿವಪ್ರಕಾಶ್ ಅವರ ಮತ್ತೊಂದು ಅಂಕಣ ಬರಹ ವಚನಗಳಲ್ಲಿ ಅಧ್ಯಾತ್ಮಿಕತೆ ಮತ್ತು ಸಾಮಾಜಿಕತೆ ಮೂಲಕ ಔಪಚಾರಿಕವಾಗಿ ಕೊನೆಗೊಂಡಿತು. ವಚನಗಳಿಗೆ ಸಂಬಂಧಿಸಿದ ಈ ಚರ್ಚೆ-ಸಂವಾದದಲ್ಲಿ ಒಟ್ಟು 27 ಲೇಖನಗಳು ಪ್ರಕಟವಾದವು. ಈ ಲೇಖನಗಳ ಸಂಗ್ರಹವೇ ಕೃತಿ.
©2024 Book Brahma Private Limited.