ವೈಚಾರಿಕತೆಯನ್ನು ಜೀವನದ ಉಸಿರಾಗಿಸಿಕೊಂಡು ಧಾರ್ಮಿಕ ಮೌಢ್ಯದ ವಿರುದ್ಧ ಕಟಿಬದ್ಧವಾಗಿರುವ ಹೊಸತು ಪತ್ರಿಕೆಯ ವಿಶೇಷಾಂಕದ ಸಂಚಿಕೆ-ಹೊಸತು; ವಿಶೇಷ. ವರ್ಷದುದ್ದಕ್ಕೂ ವಿಚಾರ ಪ್ರಚೋದಕ ಲೇಖನಗಳು, ಬರೆಹ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಪತ್ರಿಕೆಯು ತನ್ನ ಜೀವಾಳವಾಗಿಸಿಕೊಂಡ ಲೇಖನಗಳ ಬರೆಹಗಳನ್ನು ಇಲ್ಲಿ ಸಂಕಲಿಸಿದೆ. ಪತ್ರಿಕೆಯ ಬರೆಹಗಳಾದರೂ ಅವಸರ ಸಾಹಿತ್ಯದ ಪ್ರಕಾರವಾಗದೇ , ತುಂಬಾ ಗಂಭೀರವಾಗಿ ಚರ್ಚಿಸಿದ, ಜಿಜ್ಞಾಸೆ ನಡೆಸಿದ, ಸಾಮಾಜಿಕ ಪ್ರಯೋಗಾಲಯದಲ್ಲಿ ಚಿಕಿತ್ಸಕ ಬುದ್ಧಿಯಿಂದ ಕಂಡುಕೊಂಡ ಹಕೀಕತ್ತುಗಳ ಚಿತ್ರಣವಿರುವ, ಮಾನವೀಯತೆಯನ್ನೇ ಜೀವಾಳವಾಗಿಸಿಕೊಂಡ, ಶೋಷಣೆಯನ್ನು ಸದಾ ಕಾಲಕ್ಕೂ ವಿರೋಧಿಸುವ ಮನೋಭಾವದ ಬರಹಗಳು ಇಲ್ಲಿದ್ದು, ಸದಾ ಕಾಯ್ದಿಡುವ ಕೃತಿಯಾಗಿದೆ. ಲೇಖಕ ಜಿ. ರಾಮಕೃಷ್ಣ ಅವರೊಂದಿಗೆ ಡಾ. ಸಿದ್ಧನಗೌಡ ಪಾಟೀಲರು ಸಂಚಿಕೆಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.