ಲೇಖಕ ಶ್ರೀಧರ ಗೌಡರ ಅವರ ಪ್ರತಿಕಾ ಲೇಖನಗಳ ಕೃತಿ-ನುಡಿ ನರಳು. ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮ ಹಾಗೂ ಸುತ್ತಲ್ಲಿನ ಪರಿಸರದ ಕುರಿತ ಒಟ್ಟು 72 ಲೇಖನಗಳಿವೆ. ಇತಿಹಾಸ, ಶಿಕ್ಷಣ, ಕೃಷಿ, ಕ್ರೀಡೆ, ಉದ್ಯಮ, ಧರ್ಮ ಮತ್ತು ಸಂಸ್ಕತಿ, ವೈಚಾರಿಕತೆ , ಜನಪರ ಕಾಳಜಿ ಹಾಗೂ ಪರಿಸರ ಎಂಬ 9 ಭಾಗಗಳಡಿ ಲೇಖನಗಳನ್ನು ವಿಂಗಡಿಸಿದೆ. ಕೂಡಲಸಂಗಮ ಪರಿಸರ, ಐತಿಹಾಸಿಕ ಅಂಶಗಳ ಮೇಲೆ ಈ ಕೃತಿಯು ಹೆಚ್ಚಾಗಿ ಬೆಳಕು ಚೆಲ್ಲುತ್ತದೆ. ಇಲ್ಲಿಯ ಬಹುತೇಕ ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ.
©2024 Book Brahma Private Limited.