ಮಕ್ಕಳ ಸಾಹಿತ್ಯದ ರಚನೆಯಲ್ಲೇ ತೊಡಗಿಕೊಂಡ ಸಾಹಿತಿಗಳು ಅಪರೂಪವೆಂದು ಹೇಳಬೇಕು. ಅಂಥ ಅಪರೂಪದವರಲ್ಲಿ ಆನಂದ ಪಾಟೀಲ್ ಒಬ್ಬರು. ಬ್ರಾಹ್ಮಿ ಕ್ರಿಯೇಷನ್ಸ್, ಧರಣಿ ಪ್ರಿಂಟರ್ಸ್, ಹೊರತಂದಿರುವ ಡಂ ಡಂ ಊರಿಗೆ ಡಿಂ ಡಿಂ ಗಾಡಿ ಮಕ್ಕಳ ಸಾಹಿತ್ಯ ಕೃತಿ 2005 ರಲ್ಲಿ ಮೊದಲ ಆವೃತ್ತಿ ಕಂಡಿತ್ತು. 2020ರಲ್ಲಿ ಎರಡನೇ ಮುದ್ರಣ ಕಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ರಾಣೆಬೆನ್ನೂರಿ ನಲದ್ವಾ ಪ್ರತಿಷ್ಠಾನದ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದ ಕೃತಿ. ಮಕ್ಕಳನ್ನು ಕುತೂಹಲಕಾರಿಯಾಗಿಸುವ ಈ ಕಾದಂಬರಿಯ ಕತೆಗಳು ಹಾಗೂ ನಿರೂಪಣೆ ಈ ಕೃತಿಯಲ್ಲಿದೆ. ಇಂದಿನ ಜೀವನದ ಸಮಸ್ಯೆಗಳು, ಆಚಾರ ವ್ಯವಹಾರಗಳು, ನೈತಿಕ ಮೌಲ್ಯಗಳು ಇವು ಮಕ್ಕಳಿಗೆ ಅತ್ಯಗತ್ಯವಾಗಬೇಕು ಎಂಬುದು ಲೇಖಕರ ಅಭಿಪ್ರಾಯ.
©2025 Book Brahma Private Limited.