ಸ್ವಿಸ್ ನಾಟಕಕಾರ ಮತ್ತು ಕಾದಂಬರಿಕಾರ ಮ್ಯಾಕ್ಸ್ ಫ್ರಿಶ್ ಅವರ ʻಫೈರ್ ರೈಸರ್ಸ್ʼ ಎಂಬ ವ್ಯಂಗ್ಯ ನಾಟಕ ಕೃತಿಯ ಕನ್ನಡ ಅನುವಾದ ʻನಮ್ಮೂರ ಬೆಂಕಿಬಾಕರುʼ. ಲೇಖಕ ಎಸ್. ಸುರೇಂದ್ರನಾಥ್ ಅವರು ರೂಪಾಂತರಿಸಿದ್ದಾರೆ. 1958ರಲ್ಲಿ ಪ್ರಕಟವಾದ ಮೂಲ ಕೃತಿಯು ಸಾಮಾನ್ಯ ನಾಗರಿಕರ ಮೇಲೆ ದುಷ್ಟರು ಮಾಡುವ ದಾಳಿ, ಪ್ರಭಾವದ ಬಗ್ಗೆ ಹೇಳುತ್ತದೆ. ಕತೆಯನ್ನು ನಿಯಮಿತವಾಗಿ ಅಗ್ನಿಯಿಂದ ದಾಳಿಗೊಳಗಾದ ಪಟ್ಟಣದಲ್ಲಿ ಚಿತ್ರಿಸಲಾಗಿದೆ. ಪ್ರೇಗ್‌ನಲ್ಲಿ ಕಮ್ಯುನಿಸ್ಟ್ ಸ್ವಾಧೀನಕ್ಕೆ ಪ್ರತಿಕ್ರಿಯೆಯಾಗಿ ನಾಜಿಸಂ ಮತ್ತು ಫ್ಯಾಸಿಸಂನ ರೂಪಕವಾಗಿ ಈ ಪುಸ್ತಕವನ್ನು ನೋಡಲಾಗುತ್ತದೆ. ಮ್ಯಾಕ್ಸ್ ಫ್ರಿಶ್ ತಮ್ಮ ನಾಟಕಗಳಲ್ಲಿ ಸದಾ ಅಸ್ಮಿತೆಯನ್ನು, ವೈಯಕ್ತಿಕತೆ ಮತ್ತು ವ್ಯಕ್ತಿಯ ಬದುಕಿನ ಜವಾಬ್ದಾರಿಗಳನ್ನು ಕುರಿತು ಹರಿತ ವ್ಯಂಗ್ಯದಿಂದ ಚರ್ಚಿಸುವವರು. ಪ್ರಸ್ತುತ ಕೃತಿಯಲ್ಲೂ ಗಂಭೀರ ವಿಚಾರಗಳನ್ನು ಹಾಸ್ಯದ ಮೂಲಕ ಓದುಗರ ಮುಂದಿಟ್ಟಿದ್ದಾರೆ.
©2025 Book Brahma Private Limited.