ಹಾಸ್ಯ ಲೇಖಕರಾದ ಎಂ.ಎಸ್ ನರಸಿಂಹಮೂರ್ತಿ ಬರೆದಿರುವ ಕಾದಂಬರಿ’ ನೀನಂದ್ರೆ ಇಷ್ಟ ಕಣೋ’.
ಈ ಕಾದಂಬರಿಯು ಹಾಸ್ಯಮಯವಾದ ಸಂಭಾಷಣೆಗಳಿಂದ ತುಂಬಿ ಆಳದಲ್ಲಿ ಗ್ರಾಮೀಣ ಭಾರತೀಯ ಚಿಂತನೆಯನ್ನು ಮೂಡಿಸುತ್ತದೆ. ಗ್ರಾಮೀಣ ಸಾಂಸ್ಕೃತಿಕ ಸಂಪತ್ತನ್ನು ಮೊಗೆಯುವ ಸ್ವಭಾವ ಹೊಂದಿರುವ ಈ ಕಾದಂಬರಿ ನಗು ನಗುತ್ತಲೇ ಒಂದು ಆದರ್ಶ ಜಗತ್ತಿಗೆ ಓದುಗರನ್ನು ಕೊಂಡೊಯ್ಯುವ ವಿಶೇಷ ಪ್ರಯತ್ನವನ್ನು ಮಾಡುತ್ತದೆ. ಈ ಕಾದಂಬರಿಯನ್ನು ಪ್ರವೇಶಿಸುವವರು ಗ್ರಾಮೀಣ ಜೀವನದ ಧೂಳನ್ನು ತಲೆಗೆ ಏರಿಸಿಕೊಳ್ಳುತ್ತಾರೆ. ಸಿನಿಮೀಯ ಶೈಲಿ ಮತ್ತು ದಟ್ಟವಾದ ಅನುಭವಗಳ ಜಗತ್ತು ಇಲ್ಲಿ ಕಂಡು ಬರುತ್ತದೆ. ಆದರ್ಶ ಜೀವಿಗಳು, ಡೋಂಗಿಗಳು, ತಮಗೇ ಅರಿವಿಲ್ಲದಂತೆ ಬದಲಾಗುತ್ತ ಹೋಗುವುದು ಈ ಕಾದಂಬರಿಯ ಲಕ್ಷಣವಾಗಿದೆ.
©2024 Book Brahma Private Limited.