ಶೃತಿ ಗದ್ದೆಗಲ್ ಅವರ ಹಾಸ್ಯ ಬರಹಗಳ ಸಂಕಲನ ಕಿಲಕಿಲ ಕೋಕಿಲ.ಈ ಪುಸ್ತಕದಲ್ಲಿರುವ ಹೆಚ್ಚಿನ ಲೇಖನಗಳು ಕಥಾ ನಾಯಕಿ ಕೋಕಿಲಾಳ ಸುತ್ತ ಸುತ್ತುತ್ತವೆ.ಏನೋ ಮಾಡಲು ಹೋಗಿ ಇನ್ನೇನೋ ಆಗುವ ಘಟನೆಗಳು ಹಾಸ್ಯವನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಿವೆ. ಮನೆಯಲ್ಲಿಯೇ ಆಗುವ ಘಟನೆಗಳಿಗೆ ಹಾಸ್ಯದ ಲೇಪನ ಮಾಡಿ ನಗಿಸುವ ಪ್ರಯತ್ನ ಮಾಡಲಾಗಿದೆ. ಕೆಲವದರಲ್ಲಿ ವಿಡಂಬನೆ, ಹಾಗೆಯೇ ಕೆಲವು ಲೇಖನಗಳಲ್ಲಿ ಸೂಕ್ಷ್ಮವಾಗಿ ಸಂದೇಶವನ್ನೂ ಹೇಳುತ್ತದೆ. ಹೇಮಂತ್ ರಾಜ್ ಅವರ ಮುಖಪುಟವಿನ್ಯಾಸ ಲೇಖನಗಳ ನಾಯಕಿಗೆ ಹೊಂದುವಂತದ್ದಾಗಿದೆ. ಒಟ್ಟಿನಲ್ಲಿ ಬೇಸರದ ಮನಸ್ಸಿಗೆ ನಗುವನ್ನು ತರಿಸಬಲ್ಲ ಶಕ್ತಿ ಈ ಪುಸ್ತಕಕ್ಕಿದೆ ಎನ್ನಬಹುದು.
©2025 Book Brahma Private Limited.