ಎಂ.ಎಸ್. ಸುಂಕಾಪುರ
(10 January 1921 - 30 June 1992)
ಎಂ.ಎಸ್. ಸುಂಕಾಪುರ ಅವರು ಗದಗ ಜಿಲ್ಲೆಯ ಮುಳಗುಂದ (ಜನನ: 10-01-1921) ಗ್ರಾಮದವರು. ಎಂ.ಎ. ಹಾಗೂ ಪಿಎಚ್.ಡಿ. ಪದವೀಧರರು. ಬೆಳಗಾವಿ ಹಾಗೂ ಬಾಗಲಕೋಟೆಯ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಂತರ ಕ.ವಿ.ವಿ. ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು. ಶೋಭಮಾಲ- ಎಂಬುದು ಅವರು ಸ್ಥಾಪಿಸಿದ ಪ್ರಕಾಶನ ಸಂಸ್ಥೆ. ಕೃತಿಗಳು: ನಗೆ-ಹೊಗೆ, ಗಪ್-ಚಿಪ್, ತಲೆಹರಟೆಗಳು, ನಗೆಗಾರ ನಯಸೇನ ಜೀವನದಲ್ಲಿ ಹಾಸ್ಯ, ನಾಟಕಗಳು: ರೇಡಿಯೋ ನಾಟಕಗಳು ಹಾಗೂ ನಮ್ಮ ನಾಟಕಗಳು ಹಾಗೂ ಸಂಪಾದನೆ: ಜೀವನ ಜೋಕಾಲಿ, ಗಿರಿಜಾ ಕಲ್ಯಾಣ, ಶಬರಶಂಕರವಿಳಾಸ, ಶ್ರೀಕೃಷ್ಣ ಪಾರಿಜಾತ, ಪ್ರಭುಲಿಂಗ ಲೀಲೆ ಮತ್ತು ಸಂಶೋಧನಾ ಗ್ರಂಥಗಳು: ಕನ್ನಡ ಸಾಹಿತ್ಯದಲ್ಲಿ ಹಾಸ್ಯ, ಛಂದಸ್ಸಿನ ಗ್ರಂಥ. ಅವರು 30-06-1992 ರಂದು ನಿಧನರಾದರು. ...
READ MORE