‘ಕಿಸ್ ಮಾತ್ರೆ ಇದು ನಗೆಯಾತ್ರೆ’ ಕವಿ ಎ.ಎನ್. ರಮೇಶ್ ಗುಬ್ಬಿ ಅವರ ಹಾಸ್ಯ ಕವನ ಸಂಕಲನ. ಈ ಕೃತಿಗೆ ಹಾಸ್ಯ ಕಲಾವಿದ ಮೈಸೂರ್ ಆನಂದ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಎ.ಎನ್. ರಮೇಶ್ ಗುಬ್ಬಿಯವರ ಕಿಸ್ ಮಾತ್ರೆ ಹಾಸ್ಯ ಕವನ ಸಂಕಲನ ಅದ್ಭುತವಾಗಿ ಮೂಡಿ ಬಂದಿದೆ. ನಾನಂತೂ ಇದನ್ನು ಓದಿ ಸಂಪೂರ್ಣ ಸಂತಸಪಟ್ಟಿದ್ದೇನೆ. ಇಲ್ಲಿನ ಪ್ರತಿಯೊಂದು ಕವನಗಳೂ ಓದುಗರ ಮನಸ್ಸಿಗೆ ಮುದ ನೀಡಿ, ನಗೆಗಡಲಿನಲ್ಲಿ ಮುಳುಗಿಸುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಮೈಸೂರ್ ಆನಂದ್. ಜೊತೆಗೆ ಈ ಸಂಕಲನದಲ್ಲಿನ ಗಂಡಸರ ದುಃಖ. ಕಳಕಳಿ, ಪರಿಹಾರ, ತಾಜ-ಮಹಲು, ಬೇವು-ಮಾವು, ಉಪಾಯ-ಅಪಾಯ, ಕುಡಿತದ ಕಿಕ್ಕು, ಮಡದಿಯ ಲುಕ್ಕು, ಚಾಟಿಂಗ್ ಚಾಟಿಂಗ್, ಪುನರಾವರ್ತನೆ, ಗಾಡಿ, ವಾಟ್ಸಪ್ ಲವ್ವು, ಸೇರು ಸವ್ವಾ-ಸೇರು, ಕಿಸ್-ಮಾತ್ರೆ, ಲವ್ವಾಯಣ, ಅವರು ಒಪ್ಪಬೇಕು ಹೀಗೆ ಒಂದಕ್ಕಿಂತ ಒಂದು ಹಾಸ್ಯ ಕವನಗಳು ಭಿನ್ನವಾಗಿ ವಿಶಿಷ್ಟವಾಗಿದ್ದು ಖುಷಿ ಕೊಡುತ್ತಾ ನಗೆ ತರಿಸುತ್ತವೆ. ಅವರು ಒಪ್ಪಬೇಕು ಕವನದಲ್ಲಿ ಪ್ರೀತಿ ರೀತಿ ನೀತಿ ಹೇಗಿರಬೇಕೆಂಬ ಸಂದೇಶ ಅಪೂರ್ವ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.