’ಪ್ರಾಣೇಶ್ ಪಂಚ್ ಪಕ್ವಾನ್ನ’ ವಿವಿಧ ಸಂದರ್ಭಗಳಲ್ಲಿ, ವಿವಿಧ ಕಾರ್ಯಕ್ರಮಗಳಲ್ಲಿ ಸಂಗ್ರಹಿಸಿದ ಪ್ರಾಣೇಶ್ ಅವರ ನುಡಿಮುತ್ತುಗಳ ಸಂಗ್ರಹವಾಗಿದೆ. ಬೀಚೀ ಪ್ರಾಣೇಶರ ಬರಹಗಳಿಂದಾರಿಸಿದ ಈ ನುಡಿ-ಮುತ್ತುಗಳ ಹೊತ್ತಿಗೆಯಲ್ಲಿ, ವೈಚಾರಿಕತೆಗೆ ಸಾಣೆ ಹಿಡಿಯುವ ತೀಕ್ಷ್ಣ ಮಾತುಗಳಿವೆ, ನಗೆಯ ಹೊನಲನ್ನು ಚಟ್ಟನೇ ಚಿಮ್ಮಿಸುವ ಚಾಟೋಕ್ತಿ, ವ್ಯಂಗ್ಯೋಕ್ತಿಗಳಿವೆ. ಹೊಸ ವಿಚಾರಧಾರೆಯತ್ತ ಕರೆದೊಯ್ಯುವ ನುಡಿದೀಪಗಳಿವೆ. ನೋವಿನನುಭವದಿ ಕರುಳ ಕರಗಿಸುವ, ಮನ ಮೆಚ್ಚಿ ಅಹುದಹುದೆನ್ನುವ ಅನುಭವಾಮೃತ ವಾಣಿಗಳಿವೆ, ಜೀವನದ ಯಾನದಲ್ಲಿ ಹತಾಶೆ, ವಿಷಾಧಗಳನು ಅನುಭವಿಸಿದಾಗ ಅದಕ್ಕೊಂದು ಹೊಸ ನುಡಿಗಟ್ಟನ್ನು ನೀಡುವ ನವಿನೋಕ್ತಿಗಳಿವೆ, ಕಿರು ಮಾತುಗಳಲ್ಲಿ ಪಿರಿದರ್ಥವನು ಹೊಮ್ಮಿಸುವ ನವಿರೋಕ್ತಿಗಳಿವೆ, ಹೊಸನಗೆಯ ಪಂಚ್‌ಗಳಿವೆ.
©2025 Book Brahma Private Limited.