‘ಅಂ-ಕಿತಾಬ್ ಜಿಂದಾಬಾದ್’ ಹಾಸ್ಯ ಲೇಖಕ ಎಚ್.ಡುಂಡಿರಾಜ್ ಅವರ ಲಘು ಧಾಟಿಯ ಲೇಖನಗಳ ಸಂಕಲನ. ಈ ಕೃತಿಗೆ ಡಾ. ಜಯಪ್ರಕಾಶ ಮಾವಿನಕುಳಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಇಲ್ಲಿನ ಲೇಖನಗಳ ಕುರಿತು ಬರೆಯುತ್ತಾ ‘ಇದನ್ನು ನೀವು ಲಘುಧಾಟಿಯ ಲೇಖನಗಳು ಎಂದು ಯಾಕೆ ಕರೆದಿರೋ ನಾನರಿಯೆ. ನಮ್ಮ ಜೀವನದ ಲಘು ಪ್ರಸಂಗಗಳು ಜೀವನದಲ್ಲಿ ಬಹಳ ಗಂಭೀರ ಪರಿಣಾಮವನ್ನು ಬೀರುತ್ತದೆಯಷ್ಟೆ. ಪ್ರಾಯಶಃ ನೀವು ತುಸು ಹಾಸ್ಯ ಮಿಶ್ರತ ಧಾಟಿಯಲ್ಲಿ ಹೇಳಿರುವುದರಿಂದ ಹಾಗೆ ಭಾವಿಸಿರಬಹುದು. ನಿಮಗೆ ಗೊತ್ತಿರುವಂತೆ ಜಗತ್ತಿನ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ನಟಿಸಿದ ದಿ ಗ್ರೇಟ್ ಡಿಕ್ಟೇಟರ್ ನಲ್ಲಿ ಬೂಟ್ಸನ್ನು ತಿನ್ನುವ ದೃಶ್ಯ ಬರುತ್ತದೆ. ಮೇಲು ನೋಟಕ್ಕೆ ಅದು ತುಸು ಹಾಸ್ಯ ಎನಿಸಿದರೂ ಅದರ ಹಿಂದೆ ಇದ್ದ ಕ್ಷಾಮದ ಘೋರ ಚಿತ್ರಣ ನಮ್ಮ ಮನಸ್ಸನ್ನು ಕಲಕುತ್ತದೆ. ಆತನ ನಗುವಿನ ಹಿಂದೆ ಇರುವ ತೀಕ್ಷ್ಣ ನೋವು ನಮ್ಮನ್ನು ಇರಿಯುತ್ತದೆ. ಅದೇ ರೀತಿಯಲ್ಲಿ ನಿಮ್ಮ ಅನೇಕ ಲೇಖನಗಳ ಒಂದು ಗಾಢವಾದ ಪರಿಣಾಮವನ್ನು ಬೀರುತ್ತವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಜೊತೆಗೆ ತುಂಬಾ ತಾಜಾತನದಿಂದ ಕೂಡಿವೆ. ಚೇತೋಹಾರಿಯಾಗಿವೆ. ಲಘು ಧಾಟಿಯದ್ದಾದರೂ ಕ್ಲಿಷ್ಟ ಸಂಗತಿಗಳನ್ನು ಅದರ ಒಳಹೊಕ್ಕು ಬರೆದ ವಿಶಿಷ್ಟ ಲೇಖನಗಳಾಗಿವೆ. ವಸ್ತು ವೈವಿಧ್ಯದಿಂದ, ಭಾಷಾಚಕ್ಯತೆಯಿಂದ ನಿರೂಪಣೆಯ ಸೊಗಸಿನಿಂದ ಸಂಗ್ರಹಯೋಗ್ಯ ಪುಸ್ತಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2024 Book Brahma Private Limited.