ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಹೇಳಿಕೆಯ ರೂಪವು ಒಂದು, ಈ ನನ್ನ “ಖಂಡತುಂಡೋಕ್ತಿ” ಯಾವುದೇ ಕವನ, ಕಥೆ, ನೀಲ್ಗವಿತೆಯ ಹೊರತಾಗಿ ಜೀವನದ ವಿವಿಧ ಮಜಲುಗಳನ್ನು ಹೇಳಿಕೆಯ ರೂಪದಲ್ಲಿ ಚುಟುಕಾಗಿ, ಲಘು ಹಾಸ್ಯದ ರೂಪದಲ್ಲಿ ಓದಬಹುದೇ ವಿನಃ ಇದು ವಾಸ್ತವವೆ ಎಂದುಕೊಳ್ಳಲು ಪುರಾವೆಗಳನ್ನು ಹುಡುಕುವ ಅವಶ್ಯಕತೆ ಇಲ್ಲ. “ಹಾಯ್ಕು"ಗಳು ಎಂದು ಕರೆಯಲ್ಪಡುವ ಹೇಳಿಕೆಯಂತಹ ಸಾಹಿತ್ಯ ಪ್ರಕಾರಗಳು ಸಹ ಈಗ ಚಾಲ್ತಿಯಲ್ಲಿದೆ, ಅದರ ಪ್ರಭಾವ ಈ “ಖಂಡತುಂಡೋಕ್ತಿ”ಯ ಉಗಮಕ್ಕೆ ಸಾಕ್ಷಿ.
©2025 Book Brahma Private Limited.