‘ಅಪಾರ್ಥಿನಿ’ ಅಮೃತ ಸೋಮೇಶ್ವರ ಅವರ ಕೃತಿಯಾಗಿದೆ. ಶಬ್ದಗಳ ಬಾಣಗಳನ್ನು ನಮ್ಮತ್ತ ಎಸೆದು ಹೌದು ಎನ್ನಿಸುವ ಅರ್ಥ ಹೇಳಿದಾಗ ನಾವು ಬಾಯಿ ಮುಚ್ಚಬೇಕಾಗುತ್ತದೆ. ಶಬ್ದಕೋಶಗಳ ಮಧ್ಯೆ ಒಂದು ವಿಶೇಷಾರ್ಥವನ್ನು ಹೊರಡಿಸುವ ಪದಕೋಶ, ಈ ಪದಕ್ಕೆ ಹೀಗೆಲ್ಲ ಅರ್ಥ ಉಂಟುಮಾಡಬಹುದೇ ಎಂದು ವಿನೋದ ಪ್ರವೃತ್ತಿಯವರಿಗೆ ಮೆಚ್ಚಿಗೆಯಾಗುವಂತ ಕೃತಿ.
ಹೊಸತು - ಫೆಬ್ರವರಿ -2005
ಅಪಾರ್ಥ - ಅಪಹಾಸ್ಯಗಳೆಂಬ ಎರಡು ಗಾಲಿಗಳ ಮೇಲೆ ಸವಾರಿ ಹೊರಟಿರುವ ಪದಪುಂಜ ವಿನ್ಯಾಸಗಳು. ತಿಳಿಹಾಸ್ಯಭರಿತ ವಿಚಿತ್ರಾರ್ಥಗಳಿಂದ ತುಂಬಿಕೊಂಡ ಈ ಪದಗಳ ಅರ್ಥವನ್ನು ಯಥಾರ್ಥವಾದವುಗಳಲ್ಲವೆಂದು ಯಾರೂ ಧೈರ್ಯವಾಗಿ ಹೇಳುವಂತಿಲ್ಲ. ನಾ. ಕಸ್ತೂರಿ ಅವರ ''ಅನರ್ಥಕೋಶ', ಬೀಚಿಯವರ ''ತಿಮ್ಮಿಕ್ಷನರಿ, ಡಾ|| ಶಿವಪ್ಪ ಅವರ "ನುಡಿಕಿಡಿ' ಇವುಗಳನ್ನು ನೆನಪಿಸುವ ಈ ಅಪಾರ್ಥಿನಿ ತುಂಬ ಗಂಭೀರೆ. ಪಾರ್ಥೇನಿಯಂ ಗೆಳತಿಯಿರಬಹುದೆಂದು ತಪ್ಪು ತಿಳಿಯಬೇಡಿ. ಶಬ್ದಗಳ ಬಾಣಗಳನ್ನು ನಮ್ಮತ್ತ ಎಸೆದು ಹೌದು ಎನ್ನಿಸುವ ಅರ್ಥ ಹೇಳಿದಾಗ ನಾವು ಬಾಯಿ ಮುಚ್ಚಬೇಕಾಗುತ್ತದೆ. ಶಬ್ದಕೋಶಗಳ ಮಧ್ಯೆ ಒಂದು ವಿಶೇಷಾರ್ಥವನ್ನು ಹೊರಡಿಸುವ ಪದಕೋಶ, ಈ ಪದಕ್ಕೆ ಹೀಗೆಲ್ಲ ಅರ್ಥ ಉಂಟುಮಾಡಬಹುದೇ ಎಂದು ವಿನೋದ ಪ್ರವೃತ್ತಿಯವರಿಗೆ ಮೆಚ್ಚಿಗೆಯಾಗುವಂತೆ ಅತಿ ಜಾಗೃತಿಯಿಂದ ಸಂಗ್ರಹಿಸಿದ ದಿಕ್ ಶನಿ ರೀ !
©2024 Book Brahma Private Limited.