`ಚೆಂಗಾಯಣ’ ಕೃತಿಯು ಜಿ.ವಿ.ಅರುಣ ಅವರ ಇತರ ಹಾಸ್ಯ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಚೆಂಗ ಎಂಬ ವಕ್ರ ಸೃಷ್ಟಿ ಇಲ್ಲಿ ನಿದರ್ಶನ. ಈ ಚೆಂಗನಿಗೆ ಇಂದಿನ ರಾಜಕೀಯದಲ್ಲಿ ನಾಯಕನಾಗಿ ಮೆರೆಯುವ ಚಪಲ! ಎಲ್ಲ ಕಡೆ ಮಿಂಚುವ ಸಕಲ ಕಲ್ಯಾಣ ಗುಣಗಳೂ ಅವನಲ್ಲಿ ಧಾರಾಳವಾಗಿವೆ. ಇವನ ೧ಮೊದಲ ಎಲಕ್ಸನ್’ ತುಂಬ ವ್ಯಂಗ್ಯ ಪರಂಪರೆಯ ಒಂದು ಕರಡಿ ನೋಟ ಎನ್ನಬಹುದು. ಗೆಲ್ಲುವುದು ಅವನ ಗುರಿ. ‘ಬೆನಿಫಿಟ್ ಶೋ’ ನೆಪದಲ್ಲಿ ಚೆಂಗ 42,000 ರೂಪಾಯಿಗಳನ್ನು ಕಲೆಕ್ಟ್ ಮಾಡಿ, ಖರ್ಚನ್ನೆಲ್ಲ ಕಳೆದ ಮೇಲೆ ನಿಧಿಯಲ್ಲಿ 500 ರೂಪಾಯಿಗಳನ್ನು ಕಲೆಕ್ಟ್ ಮಾಡಿ, ಖರ್ಚನ್ನೆಲ್ಲ ಕಳೆದ ಮೇಲೆ ನಿಧಿಯಲ್ಲಿ 500 ರೂಪಾಯಿ ಉಳಿದಿದೆ ಎಂದು ಹೇಳುವ ಗುಣಶಾಲಿ ! ಮಾನ-ಮಾರ್ಯಾದೆಯ ಜೀವನ ರಚನೆ ಇವನ ನಿಘಂಟಿನಲ್ಲಿ ಇಲ್ಲದ ಕಾರಣ ರಾಜಕೀಯ ಕ್ಷೇತ್ರದ ಸಾರ್ವಜನಿಕ ಜೀವನದ ಹೊಲಸುಗಳನ್ನು ತೋರಿಸಲು ಇವನು ಸಿದ್ದನಾಗುತ್ತಾನೆ. ಇವನದು ರಕ್ತ ಬೀಜಾಸುರನ ಸಂತತಿ. ಅದನ್ನು ತೋರಿಸುವುದು ಅರುಣನ ಉದ್ದೇಶ. ಉಳಿದವರು ಇಂತಹ ಪಾತ್ರವನ್ನು ಹಾಸ್ಯಕ್ಕೆ ಬಳಸಿಕೊಂಡರೆ, ಚಿ. ಅರುಣ ಒಂದು ಮೂಲ ದ್ರವ್ಯವುಳ್ಳ ವ್ಯಕ್ತಿಯ ಸುತ್ತ ತನ್ನ ಭಾವನೆಗಳನ್ನು ತೇಲಿ ಬಿಡುತ್ತಾನೆ. ಇಂದಿನ ಸಮಾಜದ ಮಾನಗೆಟ್ಟ ನಾಯಕರ ಪ್ರದಾನ ದುರ್ಬುದ್ಧಿಗಳ ಭೂಮ್ಗಣ್ಣು ಇಲ್ಲಿ ಸೃಷ್ಟಿಸಿದ್ದಾನೆ ಎಂದು ವಿಶ್ಲೇಷಿತವಾಗಿದೆ.
©2024 Book Brahma Private Limited.