ಭುವನೇಶ್ವರಿ ಹೆಗ್ಡೆ ಅವರ ಹಾಸ್ಯ ಪ್ರಬಂಧ ಸಂಕಲನ ಮೃಗ -ಯಾ- ವಿನೋದ. ಈ ಸಂಲನದಲ್ಲಿ 19 ಹಾಸ್ಯ ಬರಹಗಳಿವೆ. ಅವುಗಳಲ್ಲಿ ಮೃಗ - ಯಾ - ವಿನೋದ, ಕಾಲೇಜು ಕೋಶದಲ್ಲಿ, ಕದಕ್ಕೊಂದು ಕಿಂಡಿ,ಸೀಳು ನೋಟ ಇವು ಪ್ರಮುಖವಾಗಿವೆ. ಮೃಗ - ಯಾ - ವಿನೋದ ಹಾಸ್ಯ ಬರಹದಲ್ಲಿ "ವರಾಹ" ಸಂತತಿಯಿಂದ ತಮ್ಮ ತೋಟವನ್ನು ರಕ್ಷಿಸಲು ಜನ ವಸತಿಹೀನ ರಂತೆ "ಮಾಳ "ಕಟ್ಟಿಕೊಂಡು ಮಲಗಿ ರಾತ್ರಿಯಿಡೀ ಜಾಗಟೆ ಬಾರಿಸುತ್ತಾ ಕೂಗಿ ಬೊಬ್ಬೆಯಿಟ್ಟು ಮರುಬೆಳಿಗ್ಗೆ ಸ್ವರಹೀನರಾಗಿ ಒಡಾಡುತ್ತಿರುತ್ತಾರೆ ಎಂಬ ಲೇಖಕಿಯ ಮಾತು ನಗುತರಿಸುತ್ತೆ.ಊರ ತಿಪ್ಪಾಚಾರಿ ನಿರ್ಮಿಸಿದ ಪರ್ಮಿಟ್ಟಿಲ್ಲದ ನಾಡಕೋವಿಗಳು ತಮ್ಮೊಳಗಿನ ಶಕ್ತಿಯನ್ನು ತಡೆದಿಟ್ಟುಕೊಳ್ಳಲಾರದೇ ಇನ್ನೂ ಕೋವಿ ಹಿಡಿದು ಬೆಟ್ಟವೇರುತ್ತಿರುವಾಗಲೇ ಡಂ ಎಂದು ಸಿಡಿದು ಹಂದಿಯ ಬದಲು ಬೇರಾವುದೋ ಪ್ರಾಣಿಗೆ ಅದು ತಗಲುವುದೂ ಉಂಟು ಎಂದು ತಮ್ಮ ಊರಿನ, ಹಂದಿ ಬೇಟೆಯ ಕುರಿತ ಅವರ ಹಾಸ್ಯ ಬರಹವನ್ನು ಓದಿಯೇ ಸವಿಯಬೇಕು
©2025 Book Brahma Private Limited.