‘ಇನ್ನೂ ಒಂದಿಷ್ಟು’ ಲೇಖಕ ಕು.ಗೋ ಅವರ ಹಾಸ್ಯ ಬರಹಗಳ ಸಂಕಲನ. ಇಲ್ಲಿಯ ಬರಹಗಳಲ್ಲಿ ಬದುಕಿನ ಬಗ್ಗೆ ಅವರು ಬೆಳೆಸಿಕೊಂಡ ಖಚಿತವಾದ ಅಭಿಪ್ರಾಯಗಳು ಮಿಂಚಿ ಮರೆಯಾಗುತ್ತವೆ. ಜೀವನದ ಅನುಭವವನ್ನು ತಿಳಿಹಾಸ್ಯದ ಮೂಲಕ ಓದುಗರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ತಮ್ಮ ಸುತ್ತಲಿನ ಸಮಾಜ, ಜನರ ಸ್ಥಿತಿಗತಿ ಆಲೋಚನೆಗಳ ಬಗ್ಗೆ ತಮ್ಮದೇ ನೋಟದಲ್ಲಿ ತಿಳಿದು, ತಮ್ಮ ಅನುಭವಗಳನ್ನು ದಾಖಲಿಸುವ ನಿಟ್ಟಿನಲ್ಲಿ ಲೇಖಕರು ಈ ಹಾಸ್ಯ ಬರಹಗಳನ್ನು ರಚಿಸಿದ್ದಾರೆ.
©2025 Book Brahma Private Limited.