ಲೇಖಕ ಕೆ.ಎಸ್. ಮರಿಯಯ್ಯ ಸ್ವಾಮಿ ಅವರ ಹನಿಗವಿತೆಗಳ ಕೃತಿ ʻತೆರೆದ ಕಿಟಕಿʼ. ಬಿಡುವಿನ ಸಮಯದಲ್ಲಿ ರಚಿಸಿದ ಪುಟ್ಟ ಪುಟ್ಟ ಕವಿತೆಗಳ ಗುಚ್ಛವನ್ನು ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಇಲ್ಲಿನ ಯಾವ ಕವಿತೆಗಳಿಗೂ ಶೀರ್ಷಿಕೆಗಳಿಲ್ಲ. ಆದರೆ, ಕವಿತೆಗಳಲ್ಲಿ ಬದುಕಿನ ವಿವಿಧ ಮಜಲುಗಳಲ್ಲಿ ಲೇಖಕರು ಕಂಡ ಅನುಭವಗಳ ಸಾರವಿದೆ. ಪ್ರೀತಿ, ವಿರಹ, ನಿಸರ್ಗ, ಸಾಮಾಜಿಕ, ಶೈಕ್ಷಣಿಕ-ಹೀಗೆ ಹಲವಾರು ಸಂಗತಿಗಳಿಗೆ ದಕ್ಕಿದ ಭಾವಾಭಿವ್ಯಕ್ತಿಯನ್ನು ಹೊಂದಿವೆ.
©2025 Book Brahma Private Limited.