ಭೂಮಿ ಗುಡುಗಿದಾಗ

Author : ಎಂ. ವೆಂಕಟಸ್ವಾಮಿ

Pages 64

₹ 50.00




Year of Publication: 2011
Published by: ಜಾಗೃತಿ ಪ್ರಿಂಟರ್ಸ್
Address: ನಂ. 56/1-6, ನರಸಿಂಹಯ್ಯ ಗಾರ್ಡನ್ , ಕೊಟ್ಟಿಗೆ ಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು - 560 091

Synopsys

ಭೂಮಿ ಗುಡಿಗಿದಾಗ (ಭೂಕಂಪನಗಳು) ಈ ಸಣ್ಣ ಕೃತಿಯನ್ನು ಪ್ರೌಢಶಾಲೆ ವಿದ್ಯಾರ್ತಿಗಳಿಗಾಗಿ ಲೇಖಕ ಡಾ. ಎಂ. ವೆಂಕಟಸ್ವಾಮಿ ಅವರು ಬರೆದ ಕೃತಿ. ನಮ್ಮ ಸುತ್ತಲೂ ಹಲವು ನೈಸರ್ಗಿಕ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಅವು ಏಕೆ ಘಟಿಸುತ್ತಿವೆ ಎನ್ನುವುದನ್ನು ಬೌದ್ಧಿಕವಾಗಿ ಮಾನವನು ತಿಳಿದುಕೊಳ್ಳಲು ಪ್ರಾರಂಭಿಸಿದ್ದೆ ವಿಜ್ಞಾನದ ಬೆಳವಣಿಗೆ ಪ್ರಾರಂಭಗೊಂಡಿತು. ಮಾನವನ ಜ್ಞಾನ ಬೆಳೆದಂತೆ ತನ್ನ ಸುತ್ತಲೂ ನಡೆಯುವ ಘಟನೆಗಳ ಬಗ್ಗೆ ವಿಶ್ಲೇಷಿಸುವುದನ್ನು ಕಲಿತುಕೊಂಢ. ಇಂದು ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳೆದು ನಿಂತಿದೆ.

ಪ್ರಕೃತಿಯ ವಿಕೋಪಗಳ ಪೈಕಿ ಭೂಕಂಪನಗಳು ಮಾನವ ಬದುಕಿನ ಮೇಲೆ ಭೀಕರ ಪರಿಣಾಮ ಬೀರಿವೆ. ಜ್ವಾಲಾಮುಖಿಗಳು, ಭೂಕಂಪ-ಸುನಾಮಿ, ಚಂಡಮಾರುತ, ಪ್ರವಾಹ, ಅತಿವೃಷ್ಠಿ ಅನಾವೃಷ್ಠಿ ಇತ್ಯಾದಿ ವಿಪತ್ತುಗಳು ನಿರಂತರವಾಗಿ ಭೂಮಿಯ ಮೇಲೆ ಸಂಭವಿಸುತ್ತಲೇ ಇರುತ್ತವೆ. ಫಲಿತಾಂಶ, ಸಾವಿರಾರು ಪ್ರಾಣಿಗಳು, ಮನುಷ್ಯರು ಪ್ರಾಣ ಕಳೆದುಕೊಂಡು ಹೇರಳ ಸಂಪತ್ತು ನಾಶವಾಗುತ್ತದೆ. ಸಮುದ್ರಗಳ ಮಧ್ಯದಲ್ಲಿರುವ ದ್ವೀಪಗಳು ಮತ್ತು ಪವ೵ತ ಶ್ರೇಣಿಗಳ ಆಸುಪಾಸಿರುವ ನಗರ, ಪಟ್ಟಣ, ಹಳ್ಳಿಗಳು ಭಯದ ನೆರಳಿನಲ್ಲೇ ದಿನಗಳನ್ನು ನೂಕುತ್ತವೆ. ಏಕೆಂದರೆ ಈ ಪ್ರದೇಶಗಳು ಭೂಕಂಪನಗಳ ವಲಯದಲ್ಲಿರುವುದು. ಉತ್ತರ ಭಾರತ ಮುಖ್ಯವಾಗಿ ಹಿಮಾಲಯ ಜಾಡು ತೀವ್ರ ಭೂಕಂಪನ ವಲಯದಲ್ಲಿ ಸಿಕ್ಕಿಕೊಂಡಿದೆ. ಹಾಗೆ ನೋಡಿದರೆ, ದಕ್ಷಿಣ ಭಾರತ ಅಥವಾ ಪೆನಿನ್ಸೂಲಾರ್ ಭಾರತ ಗಟ್ಟಿ ಶಿಲೆಗಳಿಂದ ಕೂಡಿದ್ದು ಸ್ವಲ್ಪಮಟ್ಟಗೆ ಸುರಕ್ಷಿತ ವಲಯವಾಗಿದೆ. ಹಿಮಾಲಯದಲ್ಲಿ ನೂರು ವರ್ಷಗಳಿಗೆ ಸರಾಸರಿ ಐದು ತೀವ್ರ ತರಹದ ಭೂಕಂಪನಗಳು ಘಟಿಸುತ್ತವೆ. ಗ್ರೀಕ್ ಚಿಂತಕ ಸ್ಟ್ರಾಬೋ ಮೊದಲಿಗೆ ಭೂಕಂಪನಗಳು ದ್ವೀಪಗಳಿಗಿಂತಲೂ ಹೆಚ್ಚಾಗಿ ತೀರ ಪ್ರದೇಶಗಳಲ್ಲಿ ಘಟಿಸುತ್ತವೆ ಎಂದ. ಅರಿಸ್ಟ್ರಾಟಲ್ ಭೂಮಿಯೊಳಗೆ ಬಿರುಗಾಳಿ ದಹ್ಯ ವಸ್ತುಗಳನ್ನು ಉರಿಸಿದಾಗ ಭೂಕಂಪನಗಳಾಗುತ್ತವೆ ಎಂದು ಹೇಳಿದ.

ರಾಮಾಯಣದಲ್ಲಿ ಭೂಮಿ ಬಿರಿಯುವ ಪ್ರಸಂಗವನ್ನು ವಿವರಿಸಲಾಗಿದ್ದು ಬಹುಶಃ ಆ ಕಾಲಕ್ಕೆ ಭೂಕಂಪನಗಳ ಬಗ್ಗೆ ತಿಳಿವಳಿಕೆ ಇರಬೇಕು. ಚೀನಿಯರು ಕ್ರಿ.ಪೂ.780ರಿಂದಲೂ ಭೂಕಂಪನಗಳ ಬಗ್ಗೆ ಸಂಪೂರ್ಣವಾಗಿ ದಾಖಲೆ ಮಾಡಿದ್ದಾರೆ. ಜಪಾನ್ 1600ರಿಂದ ಎಲ್ಲಾ ಭೂಕಂಪನಗಳನ್ನೂ ದಾಖಲಿಸಿದೆ. ಇದರಿಂದ ಭೂಮಿಯ ಅಂತರಾಳವನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಭೂಕಂಪನ ವಿದ್ವಂಸಕಾರಿಯಾಗಿದ್ದು ಪರ್ವತ ಪ್ರದೇಶಗಳಲ್ಲಿ ಸಂಭವಿಸಿದರೆ ಕಣಿವೆಗಳಲ್ಲಿ ಹಿಮರಾಶಿ ಕಡಿದುಕೊಂಡು ದೊಡ್ಡ ಪ್ರಪಾತಗಳೆ ಸೃಷ್ಟಿಯಾಗುತ್ತದೆ. ಹಳ್ಳಿ-ಪಟ್ಟಣ, ನಗರಗಳು ದ್ವಂಸವಾಗುತ್ತವೆ. ರಸ್ತೆಗಳು, ರೈಲು ಹಳಿಗಳು, ವಿದ್ಯುತ್ ತಂತಿಗಳು ಮುರಿದುಬಿದ್ದು ಬೆಂಕಿ ಒತ್ತಿಕೊಳ್ಳುತ್ತದೆ. ಸಮುದ್ರಗಳಲ್ಲಿ ಭೂಕಂಪನಗಳು ಉದ್ಭವಿಸಿದರೆ ದೈತ್ಯ ಅಲೆಗಳೆದ್ದು ಸುನಾಮಿ ಸೃಷ್ಟಿಯಾಗಿ ಸಮುದ್ರದ ದಡಗಳಿಗೆ ಅಪ್ಪಳಿಸಿ ಅಪಾರ ಆಸ್ತಿ-ಪಾಸ್ತಿ ಹಾಳಾಗಿ ಪ್ರಾಣ ಹಾನಿಯೂ ಆಗುತ್ತದೆ. ಇಂತಹ ಮಾಹಿತಿ ಒಳಗೊಂಡ ಕೃತಿ ಇದು.

ಕೃತಿಯಲ್ಲಿ  ಭೂಕಂಪನ , ಭೂಮಿಯ ಒಳರಚನೆ, ಭೂಕಂಪನಗಳಿಗೆ ಕಾರಣಗಳು , ಭೂಕಂಪನ ಮಾಪಕ , ಭೂಕಂಪನ ವಲಯಗಳ ನಕ್ಷೆ, ಭಾರತದ ಕೆಲವು ಭಯಾನಿಕ ಭೂಕಂಪನಗಳು,  ನಾಗಾಲ್ಯಾಂಡಿನಲ್ಲಿ ಸ್ವಯಂ-ಭೂಕಂಪನ ಅನುಭವ , ಪ್ರಪಂಚದ ಕೆಲವು ಭಯಾನಕ ಭೂಕಂಪನಗಳು, ಭೂಕಂಪನಗಳ ಮುನ್ಸೂಚನೆ ಅಧ್ಯಾಯಗಳು ಒಳಗೊಂಡಿವೆ. 

 

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Related Books