ಭೂವಿಜ್ಞಾನಿ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ವೈಜ್ಞಾನಿಕ ಕೃತಿ ‘ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು’ ಭೂಮಿ ಎಲ್ಲವನ್ನೂ ಸಹಿಸಿಕೊಳ್ಳುತ್ತದೆ ಎಂದು ಭಾವಿಸಿ ಭೂಮಿಯನ್ನು ಕ್ಷಮಯಾಧರಿತ್ರಿ ಎಂದು ಪ್ರಾಚೀನರು ಕರೆದರು. ಆದರೆ ಭೂಮಿಯ ಅನೇಕ ವಿದ್ಯಮಾನಗಳನ್ನು ಗಮನಿಸಿದರೆ ಅದರ ಇನ್ನೊಂದು ಮುಖದ ಪರಿಚಯವಾಗುತ್ತದೆ. ಭೂಕಂಪನ, ಜ್ವಾಲಾಮುಖಿ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಬರ ಇವೆಲ್ಲವೂ ಪ್ರಕೃತಿಯಲ್ಲಿ ಆಗಾಗ ತಲೆದೋರುವ ವೈಪರೀತ್ಯಗಳೇ. ಕೆಲವು ವಿಕೋಪಗಳನ್ನು ನಾವು ಮುಂದಾಗಿಯೇ ಅರಿಯಬಹುದು. ಆದರೆ ಕೆಲವನ್ನು ಅರ್ಥಮಾಡಿಕೊಳ್ಳುವುದಕ್ಕೆ ವಿಜ್ಞಾನಿಗಳು ಈಗಲೂ ಪ್ರಯತ್ನಿಸುತ್ತಿದ್ದಾರೆ.
ಪ್ರತಿ ವರ್ಷ ಸಾವಿರಾರು ಭೂಕಂಪನಗಳಿಂದ ಭೂಮಿ ತತ್ತರಿಸುತ್ತದೆ, ಆದರೆ ನಮ್ಮ ಅನುಭವಕ್ಕೆ ಬರುವುದು ತುಂಬ ಕಡಿಮೆ. ಹಾಗೆಯೇ ಕೆಲವು ಜ್ವಾಲಾಮುಖಿಗಳು ದೊಡ್ಡ ಪ್ರಮಾಣದಲ್ಲಿ ಮಾನವನ ಜೀವಹಾನಿ ಮತ್ತು ಆಸ್ತಿಹಾನಿ ಮಾಡುವುದುಂಟು. ಸುನಾಮಿ ಅಪ್ಪಳಿಸಿದರೆ ಕಡಲ ತೀರದ ನಗರಗಳು ನೆಲ ಕಚ್ಚುತ್ತವೆ. ಹಿಂದೂ ಮಹಾಸಾಗರದಲ್ಲಂತೂ ಪ್ರತಿ ವರ್ಷವೂ ಹತ್ತಾರು ಚಂಡಮಾರುತಗಳು ಹುಟ್ಟುತ್ತವೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಾಚೀನ ಕಾಲದಿಂದಲೂ ಕಾಡುತ್ತಲೇ ಇರುವ ನೈಸರ್ಗಿಕ ವಿಕೋಪಗಳು. ಹಿಮಾಲಯದಲ್ಲಿ ಮಳೆಗಾಲ ಬಂತೆಂದರೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿ ಸಂಚಾರವನ್ನೆ ಸ್ತಬ್ಧ ಮಾಡುತ್ತದೆ. ಇಂಥ ನೈಸರ್ಗಿಕ ವಿಕೋಪಗಳನ್ನು ಕುರಿತು ಈ ಪುಸ್ತಕದಲ್ಲಿ ಸಾಮಾನ್ಯರೂ ಅರಿಯಬೇಕಾದ ಎಲ್ಲ ಮಾಹಿತಿಗಳೂ ಇವೆ.
©2024 Book Brahma Private Limited.