ಲೇಖಕ ಟಿ.ಆರ್. ಅನಂತರಾಮು ಅವರ ವೈಜ್ಞಾನಿಕ ಕೃತಿ ‘ಭೂಕಂಪನಗಳು’. ಭೂಮಿ ಸದಾ ಅವಿಶ್ರಾಂತ. ಅದರಲ್ಲೂ ಇದ್ದಕ್ಕಿದ್ದಂತೆ ಘಟಿಸಿ ಭೂಕಂಪನ ಅಪಾರ ಪ್ರಮಾಣದ ಸಾವು ನೋವುಗಳನ್ನು ತರಬಹುದು. ಭೂಮಿಯ ಒಳಭಾಗದ ಚಲನೆ ಸುಲಭವಾಗಿ ಕಣ್ಣಿಗೆ ಗೋಚರಿಸುವುದಿಲ್ಲ. ಪ್ರಾಚೀನ ಕಾಲದಿಂದಲೂ ಭೂಕಂಪನವನ್ನು ನೈಸರ್ಗಿಕ ವಿಕೋಪಗಳಲ್ಲೇ ಅತಿ ಭಯಂಕರ ವಿದ್ಯಮಾನವೆಂದು ಪರಿಗಣಿಸಲಾಗಿದೆ.
ಪ್ರತಿವರ್ಷ ಸುಮಾರು ಐದು ಲಕ್ಷ ಭೂಕಂಪನಗಳು ಘಟಿಸುತ್ತವೆ. ಆದರೆ ಭೂಕಂಪನ ಮಾಪಕಗಳಲ್ಲಿ ಎಲ್ಲವೂ ದಾಖಲೆಯಾಗುವುದಿಲ್ಲ. ಕ್ರಿ.ಶ. 1556ರಲ್ಲಿ ಚೀನದ ಶಾನ್ಸಿ ಪ್ರಾಂತ್ಯದಲ್ಲಾದ ಭೂಕಂಪನ ಕೆಲವೇ ಸೆಕೆಂಡುಗಳಲ್ಲಿ 8,30,000 ಮಂದಿಯನ್ನು ಬಲಿ ತೆಗೆದುಕೊಂಡು ನೈಸರ್ಗಿಕ ದುರಂತದ ಅತಿ ದೊಡ್ಡ ದಾಖಲೆಯನ್ನು ನಿರ್ಮಿಸಿತ್ತು.
ಭೂಕಂಪನವೆಂದರೇನು? ಭೂಮಿಯ ಒಳರಚನೆ ಹೇಗಿದೆ? ಭೂಮಿ ಕಂಪಿಸಲು ನೈಸರ್ಗಿಕ ಕಾರಣಗಳು ಯಾವುವು? ಭೂಕಂಪನ ಮಾಪಕದಿಂದ ಕಂಪನವನ್ನು ಹೇಗೆ ದಾಖಲಿಸಬಹುದು? ಭೂಕಂಪನಕ್ಕೆ ಮುನ್ಸೂಚನೆ ಕೊಡಲು ಮಾಡಿದ ಪ್ರಯತ್ನಗಳು, ಭೂಕಂಪನ ವಲಯಗಳಲ್ಲಿ ದೊಡ್ಡ ದೊಡ್ಡ ನಗರಗಳನ್ನು ಕಟ್ಟುವುದು ಎಷ್ಟು ಅಪಾಯಕಾರಿ-ಇವೇ ಮುಂತಾದ ಪ್ರಾಥಮಿಕ ತಿಳಿವಳಿಕೆಯನ್ನು ಅತ್ಯಂತ ಸರಳವಾಗಿ ಆದರೆ ವೈಜ್ಞಾನಿಕವಾಗಿ ವಿವರಿಸುವ ಕೃತಿ ಇದು.
©2024 Book Brahma Private Limited.