ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ ‘ಭೂವಿಜ್ಞಾನ’. ಕೈಗಾರಿಕೆಗೆ ಬೆನ್ನುಲುಬಾದ ಖನಿಜ ಸಂಪನ್ಮೂಲವನ್ನು ಭೂಮಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ. ನದಿ, ಬಿಸಿಲು, ಮಳೆ, ಗಾಳಿ, ಸಾಗರ ಎಲ್ಲವೂ ಭೂಮಿಯನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೇ ಬಂದಿದೆ. ಭೂಖಂಡಗಳೂ ಸರಿಯುತ್ತಿವೆ ಎಂದರೆ ಅದು ನಮ್ಮ ಕಲ್ಪನೆಯನ್ನೂ ಮೀರಿಸಿದ ಸತ್ಯ. ಜೀವಿ ವಿಕಾಸದ ಹಲವು ಹಂತಗಳನ್ನು ಭೂಮಿ ತನ್ನ ಶಿಲಾಪುಟಗಳಲ್ಲಿ ಅಡಗಿಸಿಕೊಂಡಿದೆ. ಇದನ್ನು ಭೂವಿಜ್ಞಾನಿಗಳು ಅಧ್ಯಯನ ಮಾಡುತ್ತಾರೆ.
ಭೂಮಿ ಹುಟ್ಟಿ 460 ಕೋಟಿ ವರ್ಷಗಳಾಗಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಭೂಮಿಯ ಉಗಮದಿಂದ ತೊಡಗಿ ಈವರೆಗೆ ಆಗಿರುವ ಬದಲಾವಣೆ ಜೊತೆಗೆ ಲೋಹ, ಖನಿಜಗಳ ಬಳಕೆ ಮುಂತಾದವನ್ನು ಈ `ಭೂವಿಜ್ಞಾನ’ ಕೃತಿಯಲ್ಲಿ ಆಕರ್ಷಕವಾಗಿ ಹೇಳಲಾಗಿದೆ. ಭೂವಿಜ್ಞಾನದ ಪರಿಚಯ ಇಲ್ಲದವರಿಗೆ ಈ ಕೃತಿ ಅತ್ಯಂತ ಉತ್ತಮ ಪ್ರವೇಶ ಕೊಡುತ್ತದೆ. ಕೃತಿಯ ಮತ್ತೊಂದು ವಿಶೇಷವೆಂದರೆ ಭೂಮಿಯ ಅಧ್ಯಯನಕ್ಕೆ ಅರ್ಪಿಸಿಕೊಂಡಿರುವ ಪ್ರಸಿದ್ಧ ವಿಜ್ಞಾನಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದೆ. ಭಾರತೀಯ ವಿಜ್ಞಾನಿಗಳ ಹೆಸರೂ ಸೇರಿದೆ.
©2024 Book Brahma Private Limited.