‘ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯ’ ಟಿ.ಆರ್. ಅನಂತರಾಮು ಅವರ ವಿಜ್ಞಾನ ಲೇಖನ ಸಂಕಲನ. ಭೂಮಿ ಕುರಿತು ಎಂಥೆಂಥ ವಿಸ್ಮಯಗಳಿವೆ! ಹಿಮಾಲಯದ ಬೆಳವಣಿಗೆ ಇರಬಹುದು, ನದಿ ಬೆಟ್ಟವನ್ನು ಸವೆಸುವ ಸಹಜ ಕ್ರಿಯೆ ಇರಬಹುದು, ಸಾಗರಗಳ ವೈಶಾಲ್ಯತೆ ಇರಬಹುದು, ಇವೇ ಮುಂತಾದ ಆಸಕ್ತಿದಾಯಕ ಕ್ಷೇತ್ರಗಳಲ್ಲಿ, ಕನ್ನಡದಲ್ಲಿ ಮಾಡಿರುವ ಸಾಹಿತ್ಯ ಕೃಷಿ ಕುರಿತು `ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯ’ ವ್ಯಾಪಕವಾಗಿ ಸಮೀಕ್ಷೆ ಮಾಡುತ್ತದೆ. ಇವುಗಳ ಮೇಲೆ ಕಣ್ಣು ಹಾಯಿಸಿದರೆ ಅನೇಕ ಮಹನೀಯರ ಕಾಣಕೆ ಭೂವಿಜ್ಞಾನ ಸಾಹಿತ್ಯಕ್ಕೆ ದೊರೆತಿರುವ ಸಂಗತಿಯನ್ನು ಸ್ಪಷ್ಟವಾಗಿ ಕಾಣಬಹುದು.
ಜನಪ್ರಿಯ ವಿಜ್ಞಾನ ಸಾಹಿತ್ಯದ ಪ್ರಶ್ನೆ ಬಂದಾಗ ಪಾರಿಭಾಷಿಕ ಪದಗಳ ಬಳಕೆ ಯಾವ ಮಿತಿಯಲ್ಲಿದ್ದರೆ ಓದುಗರಿಗೆ ರುಚಿಸುತ್ತದೆ ಎಂಬುದನ್ನು ಕುರಿತು ಇಲ್ಲಿ ದೀರ್ಘ ವಿವರಣೆ ಇದೆ. ಇದರಲ್ಲಿ ಅಳವಡಿಸಿರುವ ಅಧ್ಯಾಯಗಳು - ವಿಜ್ಞಾನ ಸಾಹಿತ್ಯ ಒಂದು ವಿವೇಚನೆ-ಭೂವಿಜ್ಞಾನ ಕೃತಿಗಳ ಸ್ವರೂಪ-ಭೂವಿಜ್ಞಾನ ಅನುವಾದ-ಪ್ರಚಾರೋಪನ್ಯಾಸ ಗ್ರಂಥಗಳು-ಪಠ್ಯೇತರ ಕೃತಿಗಳು ಮತ್ತು ಲೇಖನಗಳು-ಜನಪ್ರಿಯ ವಿಜ್ಞಾನ-ಪಾರಿಭಾಷಿಕ ಪದಗಳು ಮತ್ತು ಭೂವಿಜ್ಞಾನ. ಇದರ ಜೊತೆಜೊತೆಗೆ ಈ ಸಮೀಕ್ಷಾ ಕೃತಿ ಜನಪ್ರಿಯ ವಿಜ್ಞಾನವನ್ನು ಸೃಜಿಸುವ ಕೆಲವು ಕಿವಿಮಾತುಗಳನ್ನು ಹೇಳುತ್ತದೆ. ಹೀಗೆ ಮಾಡುವಾಗ ಹಿಂದಿನವರ ಸಾಧನೆಯ ಅನೇಕ ಅಂಶಗಳು ಓದುಗರಿಗೆ ತೆರೆದುಕೊಳ್ಳುತ್ತದೆ.
©2024 Book Brahma Private Limited.