ನವರತ್ನಗಳನ್ನು ರತ್ನಕಲ್ಲುಗಳೆಂದೂ ಕರೆಯುತ್ತಾರೆ. ಆದರೆ, ನವರತ್ನಗಳು ವಿರಳವಾಗಿ ದೊರಕುವುದರಿಂದ ಇವುಗಳಿಗೆ ಬೇಡಿಕೆ ಬಹಳ. ಮೈಸೂರು ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸ ಮಾಲೆಯಟಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ನವರತ್ನಗಳೆಂದರೆ-ವಜ್ರ, ಕೆಂಪು ಅಥವಾ ಮಾಣಿಕ್ಯ, ನೀಲ, ಪಚ್ಚೆ, ಪುಷ್ಯರಾಗ, ವೈಢೂರ್ಯ, ಗೋಮೇಧಿಕ, ಮುತ್ತು ಹಾಗೂ ಹವಳ. ಐದು ರತ್ನಗಳು (ವಜ್ರ, ಕೆಂಪು, ನೀಲ, ಪಚ್ಚೆ ಹಾಗೂ ಮುತ್ತು) ಅತ್ಯಮೂಲ್ಯ ಎಂದು ಪರಿಗಣಿಸಲಾಗಿದೆ. ಹೊಳಪು, ಕಾಠಿಣ್ಯ ಹಾಗೂ ಸ್ಥಿರತ್ವ ಇಲ್ಲಿಯ ಮಾನದಂಡಗಳು. ಮೊದಲಿನ ನಾಲ್ಕು ರತ್ನಗಳು ಭೂಗರ್ಭದಲ್ಲಿ ಹಾಗೂ ಮುತ್ತ ಮಾತ್ರ ಕಡಲಿನಲ್ಲಿ ಸಿಗುತ್ತದೆ. ಹೀಗೆ ಅಪರೂಪದ ಅಧ್ಯಯನಪೂರ್ಣ ಮಾಹಿತಿಯ ಸಂಗ್ರಹವೇ ಈ ಕೃತಿ.
©2024 Book Brahma Private Limited.