ಲೇಖಕ ನಾಗೇಶ ಹೆಗಡೆ ಅವರ ಕೃತಿ ‘ಇರುವುದೊಂದೇ ಭೂಮಿ’ ಇದರ ಮುಂದುವರೆದ ಭಾಗವೇ ʻಭೂಮಿಯೆಂಬ ಗಗನನೌಕೆʼ. ಬಾಹ್ಯಾಕಾಶದಲ್ಲಿ ವರ್ಷಗಟ್ಟಲೆ ಸತತವಾಗಿ ಚಲಿಸಲು ಬೇಕಾದ ಗಗನನೌಕೆಯಲ್ಲಿ ನೀರು, ಗಾಳಿ, ಆಹಾರ ದ್ರವ್ಯ ಎಲ್ಲವೂ ಸೀಮಿತ ಪ್ರಮಾಣದಲ್ಲೆ ಇರುತ್ತವೆ. ಅದು ಮುಗಿದು ಹೋದರೆ ಹೊರಗಿನಿಂದ ತರುವಂತಿಲ್ಲ. ಈ ನಮ್ಮ ಭೂಮಿಯೂ ಗಗನನೌಕೆಯ ಹಾಗೇ. ಇಲ್ಲೂ ನೀರು, ಖನಿಜ, ಇಂಧನ- ಯಾವುದು ಮುಗಿದರೂ ಹೊರಗಿನಿಂದ ತರುವಂತಿಲ್ಲ. ಈ ನೌಕೆಯ ಸೀಮಿತ ಸಂಪತ್ತನ್ನು ಕೆಲವರು ಮಾತ್ರ ಬಾಚಿ, ದೋಚಿ ಗುಡ್ಡೆ ಹಾಕಿಕೊಳ್ಳುತ್ತಾರೆ. ಬಾಚಿಕೊಳ್ಳುವ ಭರಾಟೆಯಲ್ಲಿ ಯುದ್ಧಾಸ್ತ್ರ ನಿರ್ಮಾಣ, ಅಪಾರ ತ್ಯಾಜ್ಯ, ದ್ವೇಷ-ವೈಷಮ್ಯ ಎಲ್ಲವೂ ಗುಡ್ಡೆಗಟ್ಟಿ ಇಡೀ ಭೂಗ್ರಹವನ್ನೇ ಅಪಾಯದ ಅಂಚಿಗೆ ತಂದು ನಿಲ್ಲಿಸುತ್ತಿದೆ. ನಮಗೆ ʻಇರುವುದೊಂದೇ ಭೂಮಿʼ ಈಗ ಹೇಗಿದೆ ಎಂಬುದರ ಚಿತ್ರಣವೇ ಈ ಕೃತಿ.
©2025 Book Brahma Private Limited.