‘ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ’ ಹಿರಿಯ ಭೂವಿಜ್ಞಾನಿ ಟಿ.ಆರ್. ಅನಂತರಾಮು ಅವರ ವಿಜ್ಞಾನ ಬರಹಗಳ ಸಂಕಲನ. ಸ್ವತಃ ಭೂವಿಜ್ಞಾನಿಯಾಗಿರುವ ಟಿ.ಆರ್. ಅನಂತರಾಮು, ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. `ಪ್ರತೀ ಪುಸ್ತಕವೂ ನನ್ನ ಮಟ್ಟಿಗೆ ಹೊಸ ಪ್ರಯೋಗ ಹಾಗೆಯೇ ಹೊಸ ಸಾಹಸ' ಎನ್ನುವ ಅವರು, ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ ಕೃತಿಯನ್ನೂ ಒಂದು ವಿಭಿನ್ನ ಪ್ರಯತ್ನದ ಭಾಗವಾಗಿಯೇ ರಚಿಸಿದ್ದಾರೆ.
ಈ ಕೃತಿ ಸಂಭಾಷಣೆಯ ಮೂಲಕವೇ ತೆರೆದುಕೊಂಡು ಭೂಗರ್ಭವನ್ನು ಪರಿಚಯಿಸುತ್ತದೆ. ನಿರೂಪಣೆಯಲ್ಲಿಯೂ ಹೊಸ ಬಗೆಯ ಪ್ರಯತ್ನ. ಇಲ್ಲಿಯ ಪಾತ್ರಗಳು ಲೇಖಕರ ಸೃಷ್ಟಿ, ಆದರೆ ಸಂಭಾಷಣೆಯಲ್ಲಿ ಬರುವುದೆಲ್ಲವೂ ವಿಜ್ಞಾನವೇ, ಅದು ಹಳಿ ತಪ್ಪದಂತೆ ಎಚ್ಚರ ವಹಿಸಿದ್ದಾರೆ.
ಆಕಾಶದಲ್ಲಿ ಅವಕಾಶವಿದೆ. ಸೂರ್ಯ-ಚಂದ್ರ- ನಕ್ಷತ್ಪಾದಿಗಳನ್ನು ನೋಡುವುದು ಸುಲಭ, ಅವು ಎಷ್ಟೇ ದೂರದಲ್ಲಿರಲಿ. ಆದರೆ ನಾವುನಿಂತ ನೆಲದಡಿ ಏನಿದೆ ಎನ್ನುವುದು ಊಹೆಗೆ ಬಿಟ್ಟಿದ್ದು. ಮಾನವ ಪ್ರಯತ್ನದಿಂದಾಗಿ ಭೂಮಿಯ ಒಳಗೆ 14 ಕಿ.ಮೀ. ರಂಧ್ರ ಕೊರೆಯಲು ಸಾಧ್ಯವಾಗಿದೆ. ಅಷ್ಟೇ. ಆದರೆ ಭೂಗರ್ಭ ಹೀಗಿದೆ ಎಂದು ಹೇಳಲು ಹಲವು ಸಾಕ್ಷಿಗಳಿವೆ. ಅವುಗಳೆಲ್ಲವನ್ನೂ ಈ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
©2025 Book Brahma Private Limited.