‘ಬಿಸಿನೀರಿನ ಬುಗ್ಗೆಗಳು’ ಲೇಖಕ ಟಿ. ಆರ್. ಅನಂತರಾಮು ಅವರ ವಿಜ್ಞಾನಬರಹಗಳ ಸಂಕಲನ. ನೀರಿನ ಅನೇಕ ಬುಗ್ಗೆಗಳನ್ನು ನೋಡಿರಬಹುದು. ಉದ್ಯಾನವನಗಳಲ್ಲಿ ಯಂತ್ರಗಳನ್ನು ಬಳಸಿ ನೀರು ಬುಗ್ಗೆಯಂತೆ ಹೊರ ಚಿಮ್ಮುವಂತೆ ಮಾಡುತ್ತಾರೆ. ಆದರೆ ನಿಸರ್ಗದಲ್ಲಿ ತಾನೇ ತಾನಾಗಿ ಚಿಮ್ಮುವ ಚಿಲುಮೆಗಳಿವೆ. ಕೆಲವು ಸದಾ ಕಾಲಕ್ಕೂ ಚಿಮ್ಮಬಹುದು. ಅಮೆರಿಕದ ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿ ನೂರಾರು ಬುಗ್ಗೆಗಳಿವೆ. ಅವೆಲ್ಲವೂ ಬಿಸಿನೀರನ್ನು ಚಿಮ್ಮುತ್ತವೆ. ಉಷ್ಣತೆ 93 ಡಿಗ್ರಿ ಸೆಂ. ವರೆಗೂ ಇರುತ್ತದೆ. ಅದರಲ್ಲಿ ಒಂದು ಬುಗ್ಗೆ `ಓಲ್ಡ್ ಫೈಥ್‍ಪುಲ್‘ ಎಂಬುದು. ಇದು ಪ್ರತಿ 90 ನಿಮಿಷಕ್ಕೊಮ್ಮೆ 290 ಸೆಕೆಂಡ್ ಕಾಲ ಕರಾರುವಾಕ್ಕಾಗಿ ಚಿಮ್ಮುತ್ತದೆ. ಹಿಂದೆ ಈ ಪ್ರದೇಶ ಜ್ವಾಲಾಮುಖಿಗಳ ತಾಣವಾಗಿತ್ತು, ಈಗಲೂ ನೆಲದಾಳದಲ್ಲಿ ನೀರು ಕಾದು ಆವಿಯಾಗುವಷ್ಟು ತಾಪವಿದೆ. ಇಂಥ ಸಾವಿರಾರು ಬುಗ್ಗೆಗಳು ಈ ಉದ್ಯಾನವನದಲ್ಲಿವೆ. ಕೆಲವು ಬರಿ ಆವಿಯಷ್ಟನ್ನೇ ಉಗುಳುತ್ತವೆ.
ನ್ಯೂಜಿಲೆಂಡ್‍ನಲ್ಲಿ ಕೂಡ ಬಿಸಿನೀರಿನ ಬುಗ್ಗೆಗಳ ಉದ್ಯಾನಗಳಿವೆ. ಐಸ್ಲೆಂಡ್‍ನಲ್ಲಂತೂ ಇಂಥ ಜಾಗಗಳಲ್ಲಿ ಭೂಮಿಯ ತಾಪವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಿ ಮನೆಯನ್ನು ಬೆಚ್ಚಗಿಡುವುದರ ಜೊತೆಗೆ ತರಕಾರಿಯನ್ನೂ ಬೆಳೆಯುತ್ತಾರೆ. ಭಾರತದಲ್ಲೂ ಹಿಮಾಚಲ ಪ್ರದೇಶದಲ್ಲಿ ಬಿಸಿನೀರಿನ ಬುಗ್ಗೆ ಗಳಿವೆ. ಆದರೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಆಗುವುದಿಲ್ಲ. ಈ ಕೃತಿಯಲ್ಲಿ ಜಗತ್ತಿನಾದ್ಯಂತ ಇರುವ ಬಿಸಿನೀರಿನ ಬುಗ್ಗೆಗಳು ಮತ್ತು ಅವು ಹುಟ್ಟುವ ಕಾರಣಗಳನ್ನು ಕುರಿತು ಅತ್ಯಂತ ಸರಳವಾಗಿ ವಿವರಿಸಲಾಗಿದೆ. ಭೂಮಿಯ ವಿಸ್ಮಯವನ್ನು ಬಗೆಗಣ್ಣುಗಳಿಂದ ನೋಡಲು ಈ ಕೃತಿ ಪ್ರೇರಣೆ ಒದಗಿಸುತ್ತದೆ.
©2024 Book Brahma Private Limited.