ಭಾರತದ ಸಂವಿಧಾನ

Author : ಗೀತಾ ಕೃಷ್ಣಮೂರ್ತಿ

Pages 56

₹ 41.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಭಾರತದ ಸಂವಿಧಾನ-ಲೇಖಕಿ ಡಾ. ಗೀತಾ ಕಷ್ಣಮೂರ್ತಿ ಅವರ ಕೃತಿ. ಭಾರತದ ಸಂವಿಧಾನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಮೂಲ ಕರ್ತವ್ಯಗಳನ್ನೂ ವಿಧಿಸುತ್ತದೆ. ಈ ಕಿರುಕೃತಿಯಲ್ಲಿ ಭಾರತದ ಸಂವಿಧಾನ, ನಾಗರಿಕತ್ವ , ಮೂಲಭೂತ ಹಕ್ಕುಗಳು, ಹಾಗೆಯೇ ನಮ್ಮ ಸಂವಿಧಾನದ ವೈಶಿಷ್ಟ್ಯಗಳ ಮಾಹಿತಿ ಇದೆ. ಭಾರತದ ಸಂವಿಧಾನ ಕುರಿತು ಸರಳ ಭಾಷೆಯಲ್ಲಿ ಮಾಹಿತಿ ನೀಡಲಾಗಿದೆ.

About the Author

ಗೀತಾ ಕೃಷ್ಣಮೂರ್ತಿ
(23 October 1951)

ಸಂಶೋಧನಾ ಲೇಖಕಿಯಾದ ಗೀತಾ ಕೃಷ್ಣಮೂರ್ತಿಯವರು ಕಾನೂನು, ವ್ಯಕ್ತಿತ್ವ ವಿಕಸನ, ಸಂವಿಧಾನದ ಕುರಿತಾಗಿ ಉತ್ತಮ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಎಲ್.ಎಲ್.ಬಿ, ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. 1951 ಅಕ್ಟೋಬರ್ 23ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.  ಮಹಿಳೆ ಮತ್ತು ಕಾನೂನು - ನವ ಸಾಕ್ಷರರಿಗಾಗಿ, ವಿವಾಹ ಕಾನೂನು ಮಹಿಳೆ, ಕಾನೂನು ಮತ್ತು ರಾಜಕಾರಣ, ಮಹಿಳಾ ಹಕ್ಕುಗಳುಮಾನವ ಹಕ್ಕುಗಳ ನೆಲೆಯಲ್ಲಿ, ಮಹಿಳೆ ಸಮಾಜ ಮತ್ತು ಕಾನೂನು (ಲೇಖನಗಳ ಸಂಗ್ರಹ) ವ್ಯಕ್ತಿತ್ವ ವಿಕಸನ ಮತ್ತು ಕಾನೂನು, ಮೂಲಭೂತ ಹಕ್ಕುಗಳು ಒಂದು ಕಿರುಪರಿಚಯ, ಕೌಟುಂಬಿಕ ಕಾನೂನು ಸಂಗಾತಿ, ಕಾನೂನು ...

READ MORE

Related Books