ಡಾ. ಎಚ್.ಎನ್. ನಾಗಮೋಹನದಾಸ್ ಅವರ ಕೃತಿ-ಭೂ ವಿದ್ವಂಸಕ ತಿದ್ದುಪಡಿಗಳು. ಸರ್ವರಿಗೂ ಭೂಮಿ ದೊರೆಯಬೇಕು ಏಂಬ ಉದ್ದೇಶದೊಂದಿಗೆ ಸಂವಿಧಾನದಡಿ ಕೆಲ ನಿಯಮಗಳನ್ನು ರೂಪಿಸಲಾಯಿತು. ಮುಂದೆ ಬಂದ ಸರ್ಕಾರಗಳು ತಮ್ಮ ಸ್ವಾರ್ಥ ಸಾಧನೆಗೆ ನಿಯಮಗಳಿಗೆ ತಿದ್ದುಪಡಿ ತಂದರು. ಇದರ ಪರಿಣಾಮ, ರೈತರಿಗೆ ವಿನಾಶಕಾರಿಯಾದ ಕೆಲ ನಿಯಮಾವಳಿಗಳನ್ನು ಜಾರಿಗೆ ತರುವ ಸರ್ಕಾರದ ಹುನ್ನಾರಗಳನ್ನು ಇತ್ಯಾದಿ ಇಲ್ಲಿ ಪ್ರಸ್ತಾಪಿಸಿ ಮತ್ತು ಅವುಗಳ ಹಿಂದಿನ ಉದ್ದೇಶವನ್ನು ಲೇಖಕರು ‘ವಿದ್ವಂಸಕ’ ಎಂದು ಅಭಿಪ್ರಾಯಪಟ್ಟಿದ್ದು, ತಮ್ಮದೇ ನಿಲುವು-ವಿಚಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕೃತಿಯಲ್ಲಿ ಶಿವಸುಂದರಂ, ಎಂ. ಲಕ್ಷ್ಮಣ, ಎಸ್. ಸಿದ್ಧಲಿಂಗಯ್ಯ, ಯೋಗೇಂದ್ರ ಯಾದವ್ ಹಾಗೂ ದೇವನೂರು ಮಹಾದೇವ ಅವರ ಲೇಖನಗಳು ಅಭಿಪ್ರಾಯ ರೂಪದಲ್ಲಿವೆ.
©2024 Book Brahma Private Limited.