‘ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ’ ಅಕ್ಷತಾ ಆದರ್ಶ್ ಅವರ ಕಾನೂನಿಗೆ ಸಂಬಂಧ ಪಟ್ಟ ಕೃತಿಯಾಗಿದೆ. ಈ ಪುಸ್ತಕ ಬಳಕೆದಾರರ ವೇದಿಕೆಗಳಂತಹ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ಇದೊಂದು ಉಪಯುಕ್ತ ಕೈಪಿಡಿ. ಕಾನೂನನ್ನು ತಪ್ಪಾಗಿ ಅಥೈಸಿ ತಮಗೆ ಅನ್ಯಾಯವಾಗಿದೆ ಎಂದು ಭಾವಿಸಿ ಸ್ವಯಂ-ಸೇವಾ ವೇದಿಕೆಗಳನ್ನು ಆಶ್ರಯಿಸುವವರೂ ಇರುತ್ತಾರೆ. ಇಂತಹವರು ಕಾನೂನಿನ ನಿಜವಾದ ಅಭಿಪ್ರಾಯ ತಿಳಿದ ಮೇಲೆ ತಾವು ನೀಡಿದ ದೂರುಗಳನ್ನು ಹಿಂಪಡೆದ ಸಂದರ್ಭಗಳೂ ಇವೆ. ಕಾನೂನಿನ ಜ್ಞಾನಪ್ರಸಾರದ ದೃಷ್ಟಿಯಿಂದ ಇದೊಂದು ಸಾರ್ಥಕ ಪ್ರಯತ್ನ. ಈ ಪುಸ್ತಕವನ್ನು ಕಾನೂನಿನಲ್ಲಿ ಭಾರತದ ನಾಗರೀಕರಿಗೆ ಇರುವ ಸಮಸ್ಯೆಗಳ ಪರಿಹಾರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬರೆಯಲಾಗಿದೆ.
©2025 Book Brahma Private Limited.