ವಿವಾದಕ್ಕೀಡಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆ- 2019 ಏನು? ಯಾಕಿದನ್ನು ಜಾರಿಗೆ ತರಲು ಸರ್ಕಾರಗಳು ಹವಣಿಸುತ್ತಿವೆ. ಈ ಕಾಯಿದೆ ಜಾರಿಯಾದರೆ ಆಗುವ ಸಮಸ್ಯೆಗಳೇನು ಎಂಬುದರ ಕುರಿತು ರಾಜಾರಾಂ ತಲ್ಲೂರು ಬರೆದಿರುವ ’ಏನಿದು ಪೌರತ್ವ (ತಿದ್ದುಪಡಿ) ಕಾಯಿದೆ- 2019’ ಕೃತಿಯು ವಿವರಿಸುತ್ತದೆ.
ಕೃತಿಯ ಬಗ್ಗೆ ಬರೆಯುತ್ತಾ ಲೇಖಕರು ’ಜನರಿಂದ, ಜನರಿಗಾಗಿ ಇರಬೇಕಾದ ಜನರ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಇರುವ ಏಕೈಕ ದಿಕ್ಕೂಚಿ-ಮಾರ್ಗದರ್ಶಿ, ಮಾನದಂಡ ಎಂದರೆ "ಸಂವಿಧಾನ.” ಆದರೆ ಯಾವ ಸಂವಿಧಾನದ ಹೆಸರಿನಲ್ಲಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ್ದಾರೋ, ಅದೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸ್ವಹಿತಾಸಕ್ತಿಗಳನ್ನು ಸಾಧಿಸಲು ಹೊರಟಾಗ ಪೌರತ್ವ (ತಿದ್ದುಪಡಿ) ಕಾಯಿದೆ -2019 ಯಂತಹ ಕಾಯಿದೆಗಳು ಶಾಸನಸಭೆಗಳಲ್ಲಿ ಸಿದ್ಧಗೊಳ್ಳುತ್ತವೆ. ಈಗಾಗಲೇ ಹತ್ತು ಬಾರಿ ತಿದ್ದುಪಡಿ ಕಂಡಿರುವ ಈ ಕಾಯಿದೆ, ಈ ಹಿಂದೆ ಕನಿಷ್ಠ ಎರಡು ಬಾರಿ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಬದಲಾಗಿದೆ. ಆಯಾ ಕಾಲದ ರಾಜಕೀಯ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಈ ದೂರದೃಷ್ಟಿ ಇಲ್ಲದ ನಿರ್ಧಾರಗಳು, ನಾವು ಭಾರತೀಯರು ನಮ್ಮ ಶಾಸಕಾಂಗವನ್ನು ಲಘುವಾಗಿ ಪರಿಗಣಿಸಿರುವುದರ ಫಲ ಎಂದೇ ಅನ್ನಿಸುತ್ತದೆ.’ ಎಂದಿದ್ದಾರೆ.
©2024 Book Brahma Private Limited.