ಲೇಖಕ ಸಿ.ಎಸ್. ದ್ವಾರಕನಾಥ ಅವರ ಕೃತಿ-ಭಾರತದ ಸಂವಿಧಾನ: ಐತಿಹಾಸಿಕ ದಾಖಲೆಗಳೊಂದಿಗೆ. ಭಾರತದ ಸಂವಿಧಾನದ ಮಹತ್ವ ಹಾಗೂ ಔನ್ನತ್ಯ ಕುರಿತು ಮನದಟ್ಟು ಮಾಡಿಸಿಕೊಡುವ ಕಳಕಳಿ ಇಲ್ಲಿದೆ. ಭಾರತದ ಸಂವಿಧಾನ ಕುರಿತು ಹಗುರವಾಗಿ ಮಾತನಾಡುವ ಜನರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಈ ಕೃತಿಯು ಕನ್ನಡದಲ್ಲಿ ಮೂಡಿ ಬಂದಿದ್ದು, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದೆ ಎಂದು ಕಾನೂನು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ಲೇಖಕರ ಕಳಕಳಿಯನ್ನು ಶ್ಲಾಘಿಸಿದ್ದಾರೆ.
©2024 Book Brahma Private Limited.