ನ್ಯಾಯಾಂಗ ಒಳನೋಟ

Author : ಹೆಚ್. ಎನ್. ನಾಗಮೋಹನದಾಸ್

₹ 140.00




Year of Publication: 2023
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 9448324727

Synopsys

ನ್ಯಾಯಮೂರ್ತಿ ಹೆಚ್.ಎನ್.‌ ನಾಗಮೋಹನದಾಸ್‌ ಅವರ ನ್ಯಾಯಾಲಕ್ಕೆ ಸಂಬಂಧಪಟ್ಟ ಕೃತಿ ʻನ್ಯಾಯಾಂಗ: ಒಳನೋಟʼ. ನಮ್ಮ ದೇಶದಲ್ಲಿ ಅನಕ್ಷರತೆ ಹಾಗೂ ಬಡತನದ ಕಾರಣದಿಂದ ಬಹುತೇಕರಿಗೆ ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಹಾಗೂ ನ್ಯಾಯಕ್ಕಾಗಿ ಹೋರಾಡಲು ಸಾಧ್ಯವಾಗುತ್ತಿಲ್ಲ. ಶೇ.20 ರಷ್ಟು ಜನ ಮಾತ್ರ ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿದೆ. ಜೊತೆಗೆ ದಿನವಿಡೀ ನೂರಾರು ಬದಲಾವಣೆಗಳಾಗುತ್ತಿರುವ ಸಂದರ್ಭದಲ್ಲಿ ಎದುರಾಗುವ ಪ್ರಕರಣಗಳನ್ನು ಸರಿಯಾದ ರೀತಿಯಲ್ಲಿ ಇತ್ಯರ್ಥಪಡಿಸಲು ನಮ್ಮ ನ್ಯಾಯಾಂಗ ಸಜ್ಜುಗೊಂಡಿದೆಯೇ ಎಂಬ ಪ್ರಶ್ನೆಯ ಕುರಿತೂ ಇಲ್ಲಿ ನಾಗಮೋಹನ್ ಅವರು ಚರ್ಚಿಸಿದ್ದಾರೆ.

About the Author

ಹೆಚ್. ಎನ್. ನಾಗಮೋಹನದಾಸ್

ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದ್ದಾರೆ. ಸಂವಿಧಾನ, ಕಾನೂನು, ಮಹಿಳಾ ಸಮಾನತೆ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಜನಭಾಷೆಯಲ್ಲಿ ಸರಳವಾಗಿ ಕಾನೂನನ್ನು ಅರ್ಥಮಾಡಿಸುವಲ್ಲಿ ಕಾರ್ಯ ಪ್ರೌರುತ್ತರು. ಕಾನೂನು, ಅಸಮಾನತೆ, ಸಂವಿಧಾನದ ಅರಿವಿನ ಕುರಿತಾಗಿ ಹಲವು ಕೃತಿಗಳನ್ನು ರಚಿಸಿರುವ ನಾಗಮೋಹನದಾಸರು ದಲಿತ, ಮಹಿಳಾಪರ ಹೋರಾಟಗಳಲ್ಲಿ ಭಾಗಿಯಾಗಿ ಕಾನೂನಿನ ಅರಿವು ಮೂಡಿಸುತ್ತಾರೆ. ಅವರ ಕೃತಿಗಳು- ಮಹಿಳಾ ಅಸಮಾನತೆ, ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಇತ್ಯಾದಿ.  ...

READ MORE

Related Books