ನ್ಯಾಯದಾನವನ್ನು ಪರಿಣಾಮಕಾರಿಯಾಗಿ ಅರಿಯುವ ಶಕ್ತಿ ಮಹಿಳೆಯರಿಗೆ ಬೇಕಾಗುತ್ತದೆ ಎಂಬುದನ್ನು ಮನಗಂಡ ಆರ್.ಸುನಂದಮ್ಮ ಅವರು ಕೃತಿಯಲ್ಲಿ ಸ್ತ್ರೀಯರಿಗೆ ಅನುಕೂಲವಾಗುವಂತಹ ವಿವಿಧ ಕಾನೂನುಗಳನ್ನು ಪರಿಚಯಿಸಿದ್ದಾರೆ.
ವರದಕ್ಷಿಣೆ, ಭ್ರೂಣ ಲಿಂಗ ಪತ್ತೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಆಗದಂತೆ ಮಹಿಳೆಗೆ ರಕ್ಷಣೆಗೆ ಒದಗಿಸುವುದು, ದೇವದಾಸಿ ಪದ್ಧತಿಯ ನಿಷೇಧಕ್ಕೆ ಜಾರಿಗೆ ತಂದ ಕಾಯ್ದೆ, ಹೆರಿಗೆ ಸೌಲಭ್ಯಕ್ಕೆ ಸಂಬಂಧಿಸಿದ ಕಾಯ್ದೆ, ಅತ್ಯಾಚಾರ ತಡೆ ಕಾಯ್ದೆ, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು, ಕೌಟುಂಬಿಕ ಹಿಂಸೆ ತಡೆ ಕಾಯ್ದೆ, ಬಾಲ್ಯವಿವಾಹ ತಡೆ ಕಾಯ್ದೆ, ವಿವಿಧ ಮಹಿಳಾ ಕಾನೂನುಗಳ ಕುರಿತು ಇರುವ ಒಟ್ಟು 11 ಲೇಖನಗಳ ಸಂಗ್ರಹ ಇದು.
©2025 Book Brahma Private Limited.