ಲೇಖಕ ವೈ.ಜಿ. ಮುರಳೀಧರ ಅವರು ಸುಮಾರು ಇಪ್ಪತ್ತು ವರ್ಷಗಳಿಂದ ಗ್ರಾಹಕ ಚಳವಳಿ, ಮಾಹಿತಿ ಹಕ್ಕು, ನಾಗರಿಕ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಸಮುದಾಯಕ್ಕೆ ಕಾನೂನು ಮತ್ತು ಮಾಹಿತಿಗಳು ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ’ಯಾರ ಮಾಹಿತಿ? ಯಾರ ಹಕ್ಕು’ ಕೃತಿಯು ಹೊರಬಂದಿದೆ.
ಮಾಹಿತಿ ನಿಮ್ಮ ಹಕ್ಕು ಭಾಗ 1 ರಲ್ಲಿ ಮಾಹಿತಿ ಹಕ್ಕು ಕಾನೂನು : ಒಂದು ಪಕ್ಷಿನೋಟ, ಮಾಹಿತಿ ಪಡೆಯುವ ವಿಧಾನ, ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವ ವಿಧಾನ, ಮಾಹಿತಿ ಮಡೆಯಲು ಯಾರು ಅರ್ಹರು?, ಶಿಕ್ಷಣದ ಮೂಲಕ ಮಾಹಿತಿ ಹಕ್ಕು ಜಾಗೃತಿ, ಇತ್ಯಾದಿ ವಿಷಯಗಳ ಬಗ್ಗೆ ಪರಿಚಯಿಸುತ್ತಾರೆ.
ಮಾಹಿತಿ ಹಕ್ಕು- ಸ್ಥಿತಿಗತಿ ಭಾಗ-2 ರಲ್ಲಿ ಮಾಹಿತಿ ಹಕ್ಕು ಕಾನೂನಿನ ಅನುಷ್ಠಾನ, ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕರ್ತವ್ಯ, ಅನುಷ್ಠಾನದಲ್ಲಿನ ಲೋಪದೋಷಗಳು, ಮಾಹಿತಿ ನೀಡದಿರಲು ಹಲವಾರು ಕಾರಣಗಳು ಮುಂತಾದ ವಿಷಯ ಪ್ರಸ್ತಾಪಗಳ ಬಗ್ಗೆ ಕುರಿತು ಚರ್ಚಿಸಲಾಗಿದೆ.
ವಿಸ್ತಾರಗೊಳ್ಳುತ್ತಿರುವ ಚೌಕಟ್ಟು ಭಾಗದಲ್ಲಿ ಸಂಬಂಧಿಸಿದಂತೆ ಮಾಹಿತಿ ಹಕ್ಕಿನ ಕಾನೂನಿನ ತೆಕ್ಕೆಗೆ ನ್ಯಾಯಾಲಯ, ರಾಜಕೀಯ ಪಕ್ಷಗಳಿಗೂ ಅನ್ವಯಿಸುವ ಮಾಹಿತಿ ಹಕ್ಕಿನ ಕಾನೂನು, ಮಾಹಿತಿ ಹಕ್ಕು ಮತ್ತು ನ್ಯಾಯಾಂಗ ಮುಂತಾದವುಗಳು ಪ್ರಮುಖವಾದ ಬರಹಗಳಾಗಿವೆ.
©2024 Book Brahma Private Limited.