ಭಾರತ ಸರ್ಕಾರದ ನೀರಾವರಿ ಮತ್ತು ವಿದ್ಯುತ್ ಮಂತ್ರಾಲಯವು 1969 ಏಪ್ರಿಲ್ 10ರಂದು ರಚನೆಯಾದ ಕೃಷ್ಣಾನದಿ ಜಲವಿವಾದಗಳ ನ್ಯಾಯಾಧಿಕರಣವು ನದಿನೀರಿನ ಹಂಚಿಕೆಯ ಬಗ್ಗೆ ನಡೆಸಿದ ವ್ಯವಹರಣೆಗಳು, ಕೃಷ್ಣಾನದಿ ಮತ್ತು ನದಿ ಜಲಾನಯನ ಪ್ರದೇಶದ ವಿವರ, ನೀರಿನ ಹಂಚಿಕೆ ಬಗ್ಗೆ 1951ರಷ್ಟು ಹಿಂದೆಯೇ ಆಗಿದ್ದ ವಿವಾದಿತ ಒಪ್ಪಂದ, ಇತರ ಉಪನದಿಗಳಿಗೆ ಸಂಬಂಧಿಸಿದ ವಿವಾದ, ರಾಜ್ಯಗಳ ಪುನರ್ವಿಂಗಡಣಾ ಅಧಿನಿಯಮ 1956ರಿಂದ ಉಂಟಾದ ಹಕ್ಕುಗಳ ವಿವರಣೆ, ನೀರಿನ ವಿಭಾಗೀಕರಣ, ಅಂತರರಾಜ್ಯ ನದಿಯ ನೀರಿನ ನ್ಯಾಯಸಮ್ಮತ ಹಂಚಿಕೆಗೆ ಸಂಬಂಧಿಸಿದ ಕಾನೂನು, ಮದ್ರಾಸ್, ಮೈಸೂರು ರಾಜ್ಯ ಮತ್ತು ಹೈದರಾಬಾದ್ಗಳ ನಡುವಿನ ಒಪ್ಪಂದಗಳು. ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಅರಣ್ಯಗಳು, ಖನಿಜ, ಕೈಗಾರಿಕೆ, ವಿವಿಧ ಯೋಜನೆಗಳ ಸಂಕ್ಷಿಪ್ತ ವಿವರ, ಭಾರತ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಲ ವಿವರ, ಆಯಾ ರಾಜ್ಯಗಳು ಸಲ್ಲಿಸಿದ ವರದಿಗಳು, ನ್ಯಾಯಾಧಿಕರಣ ನೀಡಿದ ವಿವರಣೆಗಳನ್ನು ಒಳಗೊಂಡ ಈ ಸಂಪುಟವು ಜಲವಿವಾದದ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.