ಮೃತ್ಯುಮಹೋತ್ಸವ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 24

₹ 95.00




Year of Publication: 2022
Published by: ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

ಪಂಡಿತರತ್ನ ಎರ್ತೂರು ಶಾಂತಿರಾಜಶಾಸ್ತ್ರಿಗಳು ಸಂಪಾದಿಸಿರುವ ಮಹತ್ವದ ಕೃತಿ ಮೃತ್ಯುಮಹೋತ್ಸವ. ದಿವಂಗತ ಪಂಡಿತರತ್ನ ಎರ್ತೂರು ಶ್ರೀ ಶಾಂತಿರಾಜಶಾಸ್ತ್ರಿಗಳವರು ತಮ್ಮ ಈ ಪುಸ್ತಕಕ್ಕೆ ಮೃತ್ಯುಮಹೋತ್ಸವ ಎಂದು ಹೆಸರಿಟ್ಟಿದ್ದಾರೆ. ಮೃತ್ಯುವು ನಿಜವಾಗಿಯೂ ಮಹೋತ್ಸವವೇ ಆಗಿದೆ. ಪುನರ್ಜನ್ಮದಿಂದ ಪಾರಾಗುವ ಅವಕಾಶವನ್ನು ಈ ಮೃತ್ಯು ಒದಗಿಸಿದೆಯಲ್ಲವೆ. ಈ ಶತಮಾನ ಕಂಡ ಮಹಾ ಮೇಧಾವಿಗಳಲ್ಲಿ ಶ್ರೀ ಶಾಸ್ತ್ರಿಗಳವರು ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ಐವತ್ತಕ್ಕೂ ಹೆಚ್ಚು ಕೃತಿಗಳ ರಚನೆ ಮಾಡಿ, ನೂರಾರು ಲೇಖನಗಳನ್ನು ಬರೆದು, ಎಲ್ಲಕ್ಕೂ ಮಿಗಿಲಾಗಿ ಕನ್ನಡಿಗರಿಗೆ ಮಹಾಪುರಾಣವನ್ನು ನೀಡಿ ಶಾಶ್ವತ ಕೀರ್ತಿಯನ್ನು ಪಡೆದಿದ್ದಾರೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books