12 ನೇ ಶತಮಾನದಲ್ಲಿ ಅಹಿಂಸೆಯ ತತ್ವದ ಮೂಲಕ ಚಿರಪರಿಚಿತರಾದ “ ಆಚಾರ್ಯ ಹೇಮಚಂದ್ರ” ಅವರ ಬಗ್ಗೆ ಲೇಖಕ ಎಸ್.ಬಿ ವಸಂತರಾಜಯ್ಯ ರವರು ಈ ಕೃತಿಯಲ್ಲಿಕೊಟ್ಟಿದ್ದಾರೆ. ಅಹಿಂಸೆಯ ಮೂಲಕ ಪ್ರಸಿದ್ಧಿಯಾದ ಮಹಾತ್ಮ ಗಾಂಧೀಜಿ ಅವರು ಹುಟ್ಡಿದ ಗುಜರಾತ್ ನಲ್ಲಿ ಅಹಿಂಸೆಯನ್ನು ಗಾಂಧೀಜಿಗಿಂತ ಮೊದಲೇ ಹೇಮಚಂದ್ರ ಅವರು ಪ್ರತಿಪಾದಿಸಿದ್ದರು. ಗುಜರಾತಿನ ರಾಜ ಸಿದ್ದರಾಜ ಜಯಸಿಂಹ ಮತ್ತು ಅವರ ನಂತರ ಪಟ್ಟಕ್ಕೇರಿದ ಕುಮಾರಪಾಲನಿಗೆ ರಾಜಗುರುವಾಗಿ ಮಾರ್ಗದರ್ಶನ ಮಾಡಿದ್ದ ಹೇಮಚಂದ್ರರು ಅಹಿಂಸೆಯ ತತ್ವವನ್ನು ಮುನನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿಗಳ ಸಂಕುಲಕ್ಕೂ ತುಂಬಾ ಶೃದ್ಧೆಯಿಂದ ಪಾಲನೆ ಮಾಡಿದವರು. ಈ ಎಲ್ಲಾ ಸಂಗತಿಗಳನ್ನು ಈ ಕೃತಿಯಲ್ಲಿ ವಿವರವಾಗಿ ಕಟ್ಟಿಕೊಡಲಾಗಿದೆ.
©2025 Book Brahma Private Limited.