ಮಂಗರಸಕವಿ ವಿರಚಿತ ನೇಮಿಜಿನೇಶ ಸಂಗತಿ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 162

₹ 213.00




Year of Publication: 2013
Published by: ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

‘ಮಂಗರಸಕವಿ ವಿರಚಿತ ನೇಮಿಜಿನೇಶ ಸಂಗತಿ’ ಹರಿವಂಶಪುರಾಣ- ಕಥಾಸಾರಾಂಶವನ್ನು ಪಂಡಿತ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಪರಿಶೋಧಿಸಿದ್ದಾರೆ. ಕೃತಿಗೆ ಎರ್ತೂರು ಶಾಂತಿರಾಜಶಾಸ್ತ್ರಿ ಅವರ ಮುನ್ನುಡಿ ಬರಹವಿದ್ದು, ಕೃತಿಯ ಕುರಿತು ಬರೆಯುತ್ತಾ ‘ಕ್ಷತ್ರಿಯರು ರಾಜ್ಯವನ್ನಾಳುತ್ತ ಪ್ರಜಾಪರಿಪಾಲನವನ್ನು ಮಾಡುವುದರಲ್ಲೇ ಅಲ್ಲದೇ ಸಾಹಿತ್ಯ ಸೇವೆಯಲ್ಲಿಯೂ ಅವರು ಹಿಂದಿಲ್ಲವೆಂಬುದಕ್ಕೆ ಶ್ರೀನೇಮಿಜಿನೇಶ ಸಂಗತಿಯೆಂಬ ಈ ಗ್ರಂಥವೂ ಮೂರ್ತಿಮತ್ತಾದ ಒಂದು ನಿದರ್ಶನವಾಗಿರುತ್ತದೆ. ಇದರ ಕರ್ತರು ಜೈನಕ್ಷತ್ರಿಯ ಕುಲೋತ್ಪನ್ನರಾದ ಶ್ರೀ ಮಂಗರಸಕವಿವರ್ಯರು. ಇವರ ವಿಸ್ತೃತವಾದ ಪರಿಚಯವನ್ನು ಮುಂದೆ ಕವಿಪರಿಚಯ ವೆಂಬ ಭಾಗದಲ್ಲಿ ಕೊಡಲಾಗುವುದು’ ಎಂದು ವಿವರಿಸಿದ್ದಾರೆ. ಹಾಗೇ ಈ ಕವಿಯಿಂದಲೇ ರಚಿತವಾಗಿರುವ ಜಯನೃಪಕಾವ್ಯವನ್ನೂ ಸಮ್ಯಕ್ತ್ವ ಕೌಮುದಿಯನ್ನೂ ನಾನು ಓದಿ ನೋಡಿದ ಮೇಲೆ ನನಗೆ ಈ ಕವಿಯ ವಿಶೇಷವಿಷಯಗಳನ್ನು ತಿಳಿಯಬೇಕೆಂಬ ಕೌತುಕವು ಹುಟ್ಟಿತು. ಆಗ ನಾನು ನಮ್ಮ ಕಲ್ಲಹಳ್ಳಿ ಮೊದಲಾದ ಸ್ಥಳಗಳಲ್ಲಿದ್ದ ಹಳೆಯ ಗ್ರಂಥಗಳನ್ನೂ ಕಾಗದ-ಪತ್ರಗಳನ್ನೂ ಹುಡುಕಿ ತೆಗೆದೆನು. ಆ ಕಾಗದ ಪತ್ರಗಳಿಂದ ನನಗೆ ಶ್ರೀ ಮಂಗರಸರ ವಿಶೇಷ ಪರಿಚಯವುಂಟಾಗಿ ಅವರಲ್ಲಿ ನನಗೆ ಆತ್ಮೀಯರೆಂಬ ಭಾವನೆಯಿಂದಿದ್ದ ಗೌರವಬುದ್ಧಿಯು ಇಮ್ಮಡಿಯಾಯ್ತು ಮತ್ತು ಕನ್ನಡ ಗ್ರಂಥಗಳನ್ನೋದಬೇಕೆಂಬ ಅಭಿಲಾಷೆಯು ಹೆಚ್ಚಿತು. ನಮ್ಮ ಕಲ್ಲಹಳ್ಳಿಯಲ್ಲಿದ್ದ ಗ್ರಂಥಸಂಗ್ರಹದಲ್ಲಿ ಶ್ರೀಮಂಗರಸರ ನೇಮಿಜಿನೇಶ ಸಂಗತಿ ಹರಿವಂಶಪುರಾಣವೆಂಬೀ ಗ್ರಂಥವು ನನಗೆ ದೊರೆತು. ಇದನ್ನು ನಾನು ಓದಿ ನೋಡಲಾಗಿ ಇದು ಹಾಡುಗಬ್ಬವಾಗಿರುವುದರಿಂದಲೂ ಇದರ ಶೈಲಿಯು ಸುಲಲಿತವಾಗಿರುವುದರಿಂದಲೂ ವಿಷಯವು ಬಹು ಹೃದಯಂಗಮವಾಗಿರುವುದರಿಂದಲೂ ಕವಿಯ ಜೀವಕಳೆಯಂತಿರುವ ಕವಿಯ ಸಜೀವಸ್ಮಾರಕವಾಗಿರುವ ಈ ಗ್ರಂಥವನ್ನು ಪ್ರಕಾಶನಕ್ಕೆ ತಂದು ಆ ಕವಿವರ್ಯರಲ್ಲಿ ನನಗಿರುವ ಪೂಜ್ಯಭಾವನೆಯನ್ನು ಸಾರ್ಥಕಗೊಳಿಸಬೇಕೆಂಬ ಇಚ್ಛೆಯು ಆಗಲೇ ಉಂಟಾಗಿದ್ದು ಅದು ಈಗ ನೇರವೇರಿದುದರಿಂದಲೂ ನಮ್ಮನ್ನಾಳುವ ಮಹಾಸ್ವಾಮಿಯವರು ಈ ಪುಸ್ತಕದ ಸಮರ್ಪಣೆಗೆ ತಮ್ಮ ಘನಸಮ್ಮತಿಯನ್ನು ದಯಪಾಲಿಸಿ ಅನುಗ್ರಹಿಸಿರುವುದರಿಂದಲೂ ನಾನು ಅತ್ಯಂತ ಸಂತೋಷವುಳ್ಳವನಾಗಿ ಮಹಾಸ್ವಾಮಿಯವರ ಅನುಗ್ರಹಕ್ಕಾಗಿಯೂ ಅವರಿಗಿರುವ ಕರ್ನಾಟಕ ಭಾಷಾಭಿಮಾನಕ್ಕಾಗಿಯೂ ಸಾಹಿತ್ಯ ಸೇವಕರಿಗೆ ಸಮಯೋಚಿತವಾಗಿ ಅವರು ದಯಪಾಲಿಯುತ್ತಿರುವ ಪ್ರೋತ್ಸಾಹಕ್ಕಾಗಿಯೂ ಮಹಾಸ್ವಾಮಿಯವರ ಚರಣ ಕಮಲಕ್ಕೆ ರಾಜಭಕ್ತಿ ಕೃತಜ್ಞತಾಪೂರ್ವಕವಾದ ಅನಂತ ವಂದನೆಗಳನ್ನರ್ಪಿಸುತ್ತೇನೆ ಎಂದಿದ್ದಾರೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books