ದೀಘನಿಕಾಯ ಎಂಬ ಪಾಲಿಗ್ರಂಥದಿಂದ ಆಯ್ದ ಮೂರು ಸೂತ್ರಗಳನ್ನು ಜಿ.ಪಿ. ರಾಜರತ್ನಂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಮೂರೂ ಸೂತ್ರಗಳ ಅನುವಾದಗಳು ಮೊದಲು ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಶ್ರಾಮಣ್ಯ ಫಲ ಸೂತ್ರ, ಅಂಬಷ್ಟ ಸೂತ್ರ ಹಾಗೂ ಸೋಣದಂಡ ಸೂತ್ರಗಳನ್ನು ಅನುವಾದಿಸಲಾಗಿದೆ.
ಮನುಷ್ಯ ಸನ್ಯಾಸಿಯಾಗುವುದರಿಂದ ಫಲವೇನು ಎಂಬುದನ್ನು ಶ್ರಾಮಣ್ಯ ಫಲ ಸೂತ್ರದಲ್ಲಿ, ಧರ್ಮವನ್ನು ವಿವರಿಸುವಾಗ ಜಾತಿವಾದ, ವರ್ಣವಾದ ಹಾಗೂ ಗೋತ್ರವಾದಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಅಂಬಷ್ಟ ಸೂತ್ರ ಹೇಳುತ್ತದೆ. ಸೋಣದಂಡ ಸೂತ್ರದಲ್ಲಿ ಜಾತಿ, ವರ್ಣ ಹಾಗೂ ಮಂತ್ರಗಳಿಗಿಂತ ಶೀಲ ಪ್ರಜ್ಞೆಗಳೇ ಹೆಚ್ಚಿನವು. ಇವುಗಳಿಂದಲೇ ಬ್ರಾಹ್ಮಣ್ಯ ಸಿದ್ದಿಸುತ್ತದೆ ಎಂದು ವಿವರಿಸಲಾಗಿದೆ.
©2025 Book Brahma Private Limited.