ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ-2

Author : ಎಸ್.ಪಿ. ಪದ್ಮಪ್ರಸಾದ್‌

Synopsys

ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ರಚಿಸಿದ ಕೃತಿ-ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ-2. ಕ್ರಿ.ಶ. 1150 ರಿಂದ 1300 ರವರೆಗಿನ ಜೈನ ಕವಿಗಳ ಕೃತಿಗಳ ಪರಿಚಯ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಜೈನ ಕವಿಗಳಾದ ರಾಜಾದಿತ್ಯ, ಜನ್ನ, ಆಚಣ್ಣ, ಜಕ್ಕಲಾಂಬಾ , ನೇಮಿಚಂದ್ರ , ವೀರಣಂದಿ , ಶಾಂತಿವರ್ಮ , ಕರ್ಣಪಾರ್ಯ , ಆಧ್ಯಾತ್ಮಿ ಬಾಲಚಂದ್ರ, ಜಗದ್ದಳ ಸೋಮನಾಥ, ಸೋಮನೋಬಾಣ, ಅಗ್ಗಳ, ಬ್ರಹ್ಮಶಿವ, ಬೊಪ್ಪಣ ಪಂಡಿತ, ಕೇಶಿಯಣ್ಣ , ವಾಸುದೇವ, ದೇವೇಂದ್ರಮುನಿ , ಮುನಿಚಂದ್ರ , ಪಾರ್ಶ್ವಪಂಡಿತ, ಬಾಳಚಂದ್ರ, 2 ನೇ ಗುಣವರ್ಮ, ಕಮಲಭವ, ಆಂಡಯ್ಯ, ಮಲ್ಲಿಕಾರ್ಜುನ, ಜಯವರ್ಮ, ನಯವರ್ಮ, ಮಾಘಣಂದಿ, ಮಹಾಬಲ, ಬಾಳಚಂದ್ರ ಪಂಡಿತ, ಅಮೃತ ನಂದಿ, ಯಶಶ್ಚಂದ್ರ, ಪದ್ಮಪ್ರಭ , ಪ್ರಭಾಚಂದ್ರ, ಕನಕಚಂದ್ರ, ಹಸ್ತಿಮಲ್ಲ, ರಟ್ಟಕವಿ -- ಈ ಜೈನ ಕವಿಗಳ ಸಮಗ್ರ ಜೈನ ಸಾಹಿತ್ಯದ ವಿಶ್ಲೇಷಣೆ ಒಳಗೊಂಡಿದೆ.

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Related Books